ಹೆಡಗಾಪೂರ ಶಿವಲಿಂಗ ಶಿವಾಚಾರ್ಯರಿಗೆ ರುದ್ರಾಕ್ಷಿ ತುಲಾಭಾರಶ್ರೇಷ್ಠ ಸಂತ ಶಿವಲಿಂಗ ಶಿವಾಚಾರ್ಯರು ಗ್ರಂಥ ಬಿಡುಗಡೆ

filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;

ಸಂಜೆವಾಣಿ ವಾರ್ತೆ
ಔರಾದ್ : ಏ.15:ತಾಲೂಕಿನ ಹೆಡಗಾಪೂರ ಗ್ರಾಮದ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀಗಳಾದ ಶಿವಲಿಂಗ ಶಿವಾಚಾರ್ಯರ ಗುರುವಂದನಾ ಸಮಾರಂಭ ಮತ್ತು ರದ್ರಾಕ್ಷಿ ತುಲಭಾರ ಕಾರ್ಯಕ್ರಮ ಭಾನುವಾರ ಶ್ರದ್ಧಾ, ಭಕ್ತಿಯಿಂದ ಅದ್ಧೂರಿಯಾಗಿ ಜರುಗಿತು.
ಗ್ರಾಮದ ಹೊರವಲಯದಲ್ಲಿ ಹಾಕಲಾದ ವಿಶಾಲವಾದ ವೇದಿಕೆ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿರುವ ಗುರುವಂದನಾ ಕಾರ್ಯಕ್ರಮದಲ್ಲಿ ಜಿಲ್ಲೆ ಸೇರಿದಂತೆ ನೇರರಾಜ್ಯಗಳ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.
ಮುತ್ತೈದೆಯರಿಂದ ಶ್ರೀಗಳ ತೊಟ್ಟಿಲು, ರುದ್ರಾಕ್ಷಿಯಿಂದ ತುಲಾಭಾರ ಮಾಡಲಾಯಿತು. ಶ್ರೀಗಳ ಪಾದಪೂಜೆ, ಅನ್ನದಾಸೋಹ ನಡೆಯಿತು. ಶಿವಲಿಂಗ ಶಿವಾಚಾರ್ಯರಿಗೆ ಭಕ್ತರು ದಾರಿಯಲ್ಲಿ ಹೂವು ಚೆಲ್ಲಿ ಸ್ವಾಗತಿಸಿ ಅವರನ್ನು ಮುಖ್ಯವೇದಿಕೆಗೆ ಬರಮಾಡಿಕೊಂಡರು.
ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ವಿವಿಧ ಸಂಘ ಸಂಸ್ಥೆಯವರು, ಮಠಾಧೀಶರು ಹಾಗೂ ಅಪಾರ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


ವೇಳೆ ಶಿವಲಿಂಗ ಶಿವಾಚಾರ್ಯರ ಕುರಿತು ಕರ್ನಾಟಕದ ಉತ್ತರ ಪ್ರಾಂತ್ಯ ವಿಶ್ವ ಹಿಂದೂ ಪರಿಷತ್ ಕಾರ್ಯಕಾರಣಿ ಸದಸ್ಯ ರಾಮಕೃಷ್ಣನ್ ಸಾಳೆ ಅವರು ಹೊರ ತಂದಿರುವ ಶ್ರೇಷ್ಠ ಸಂತ ಶಿವಲಿಂಗ ಶಿವಾಚಾರ್ಯರು ಎಂಬ ಗ್ರಂಥ ಬಿಡುಗಡೆ ಮಾಡಲಾಯಿತು. ಈ ವೇಳೆ ಕೇದಾರಲಿಂಗ ದೇವರು ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡರು.