ಹೆಜಮಾಡಿ ಟೋಲ್  ದುಬಾರಿ  !


ಮಂಗಳೂರು, ನ.೨೫- ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಈ ನಡುವೆ ಹೆಜಮಾಡಿ ಸುರತ್ಕಲ್ ಟೋಲ್‌ಗೇಟನ್ನು ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನ ಮಾಡುವಂತೆ ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಹೆಜಮಾಡಿಯಲ್ಲಿ ಟೋಲ್ ಗೇಟ್ ಶುಲ್ಕ ಪರಿಷ್ಕೃರಿಸಿದೆ. ಹೀಗಾಗಿ ನಿರೀಕ್ಷೆಯಂತೆ ಹೆಜಮಾಡಿಯಲ್ಲಿ ಸುಂಕ ದುಬಾರಿಯಾಗಲಿದ್ದು, ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದು ವೇಳೆ ಸುರತ್ಕಲ್ ಟೋಲ್‌ಗೇಟ್ ತೆರವಿನ ಬಳಿಕ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಶುಲ್ಕ ಹೆಚ್ಚಿಸಬಾರದು. ಹೆಚ್ಚಿಸಿದರೆ ಪ್ರತಿಭಟನೆ ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ ಎಂದು ಸುರತ್ಕಲ್ ಟೋಲ್‌ವಿರೋಧಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಈ ನಡುವೆ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಟೋಲ್ ಶುಲ್ಕ ಪರಿಷ್ಕರಣೆ ನಡೆಸಿದೆ. ಇದು ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಒದಗಿಸಿದೆ ಎನ್ನಲಾಗಿದೆ. ಹೆಜಮಾಡಿ ಟೋಲ್ ಗೇಟ್‌ನಲ್ಲಿ ಟೋಲ್ ಸಂಗ್ರಹಕ್ಕೆ ಯಾವುದೇ ಅಡ್ಡಿ ಅಥವಾ ತೊಂದರೆ ನೋಡಿಕೊಳ್ಳಬೇಕು ಮತ್ತು ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಏರಿಕೆಯಾದ ಸುಂಕದ ಬಳಿಕ ಯಾವುದೇ ಸಮಸ್ಯೆಯಾಗಿ ಟೋಲ್ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ಎನ್‌ಎಚ್‌ಎಐ ಜತೆಗಿನ ರಾಜ್ಯ ಸಹಕಾರ ಒಪ್ಪಂದದಂತೆ ನಷ್ಟವನ್ನು ರಾಜ್ಯವೇ ಭರಿಸಬೇಕುಎಂದು ಎನ್‌ಎಚ್‌ಎಐ ಆದೇಶದಲ್ಲಿ ಹೇಳಲಾಗಿದೆ. ಇದಲ್ಲದೆ ಇದುವರೆಗೆ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಕೆಎ ೧೯ ನೋಂದಣಿಯ ಕಾರುಗಳಿಗೆ ಇದ್ದ ರಿಯಾಯಿತಿ ರದ್ದಾಗಲಿದೆ.

ಪರಿಷ್ಕೃತ ಟೋಲ್ ಶುಲ್ಕ  
ಬಸ್ ಅಥವಾ ಟ್ರಕ್ (೨ ಆಕ್ಸೆಲ್‌ಗಳು)ಸುರತ್ಕಲ್ ನಲ್ಲಿ ರೂ ೨೧೦ ಮತ್ತು ಹೆಜಮಾಡಿಯಲ್ಲಿ ರೂ ೧೪೫, ಹೆಜಮಾಡಿ ಪರಿಷ್ಕೃತ ಟೋಲ್ ಶುಲ್ಕ ೩೫೫ರೂ. ಏಕಮುಖ ಸಂಚಾರ : ಜೀಪ್, ವ್ಯಾನ್ ಅಥವಾ ಲಘು ಮೋಟಾರು ವಾಹನ: ಸುರತ್ಕಲ್ ನಲ್ಲಿ ೬೦ ರೂ., ಹೆಜಮಾಡಿಯಲ್ಲಿ ೪೦ ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ ೧೦೦ ರೂ. ಲಘು ವಾಣಿಜ್ಯ ವಾಹನ ,ಲಘು ಸರಕು ವಾಹನ ಅಥವಾ ಮಿನಿ ಬಸ್: ಸುರತ್ಕಲ್ ನಲ್ಲಿ ರೂ ೧೦೦ ಮತ್ತು ಹೆಜಮಾಡಿಯಲ್ಲಿ ರೂ ೭೦, ಹೆಜಮಾಡಿಯ ಪರಿಷ್ಕೃತ ಟೋಲ್ ಶುಲ್ಕ ೧೭೦ ರೂ. ಭಾರೀ ಕನ್ಸ್ಟ್ರಕನ್ ಮೆಶಿನರಿ ಅಥವಾ ಮಲ್ಟಿ ಆಕ್ಸಲ್ ವಾಹನ ಮೂರರಿಂದ ಆರು ಆಕ್ಸೆಲ್‌ಗಳುಸುರತ್ಕಲ್ ನಲ್ಲಿ ೩೨೫ ರೂ., ಹೆಜಮಾಡಿಯಲ್ಲಿ ೨೨೫ ರೂ., ಪರಿಷ್ಕೃತ ಶುಲ್ಕ ೫೫೦ ರೂ. ಏಳು ಅಥವಾ ಹೆಚ್ಚಿನ ಆಕ್ಸೆಲ್‌ಗಳ ಭಾರೀ ಗಾತ್ರದ ವಾಹನಸುರತ್ಕಲ್ ನಲ್ಲಿ ೪೦೦ ರೂ., ಹೆಜಮಾಡಿಯಲ್ಲಿ ೨೭೫ ರೂ., ಪರಿಷ್ಕೃತ ಶುಲ್ಕ ೬೭೫ ರೂ. ದ್ವಿಮುಖ ಸಂಚಾರ: ಜೀಪ್, ವ್ಯಾನ್ ಅಥವಾ ಲಘು ಮೋಟಾರು ವಾಹನಸುರತ್ಕಲ್ ನಲ್ಲಿ ೯೦ ರೂ., ಹೆಜಮಾಡಿಯಲ್ಲಿ ೬೫ ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ ೧೫೫ ರೂ. ಲಘು ವಾಣಿಜ್ಯ ವಾಹನ ಲಘು ಸರಕು ವಾಹನ ಅಥವಾ ಮಿನಿ ಬಸ್ ಸುರತ್ಕಲ್ ನಲ್ಲಿ ರೂ ೧೫೦ ಮತ್ತು ಹೆಜಮಾಡಿಯಲ್ಲಿ ರೂ ೧೦೦, ಹೆಜಮಾಡಿ ೨೫೦ ರಲ್ಲಿ ಪರಿಷ್ಕೃತ ಟೋಲ್ ಶುಲ್ಕ. ಬಸ್ ಅಥವಾ ಟ್ರಕ್ (೨ ಆಕ್ಸೆಲ್‌ಗಳು)ಸುರತ್ಕಲ್ ನಲ್ಲಿ ೩೧೦ ರೂ., ಹೆಜಮಾಡಿಯಲ್ಲಿ ೨೧೫ ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ ೫೨೫ ರೂ.  ಭಾರೀ ನಿರ್ಮಾಣ ಯಂತ್ರಗಳು ಅಥವಾ ಭೂಮಿ ಚಲಿಸುವ ಉಪಕರಣಗಳು ಅಥವಾ ಮಲ್ಟಿ ಆಕ್ಸಲ್ ವಾಹನ ಮೂರರಿಂದ ಆರು ಆಕ್ಸೆಲ್‌ಗಳು ಸುರತ್ಕಲ್ ನಲ್ಲಿ ೪೯೦ ರೂ., ಹೆಜಮಾಡಿಯಲ್ಲಿ ೩೩೫ ರೂ., ಪರಿಷ್ಕೃತ ಶುಲ್ಕ ೮೨೫ ರೂ. ಭಾರೀ ಗಾತ್ರದ ವಾಹನ ಏಳು ಅಥವಾ ಹೆಚ್ಚಿನ ಆಕ್ಸೆಲ್‌ಗಳು ಸುರತ್ಕಲ್ ನಲ್ಲಿ ೫೯೫ ರೂ., ಹೆಜಮಾಡಿಯಲ್ಲಿ ೪೧೦ ರೂ., ಪರಿಷ್ಕೃತ ಶುಲ್ಕ ೧,೦೦೫ ರೂ.