ಹೆಚ್-೧ಬಿ ವಿಸಾದಾರರಿಗೆ ಜೋ ಬೈಡೆನ್ ಉಡುಗೊರೆ!

ನ್ಯೂಯಾರ್ಕ್, ನ.೧೨- ಡೊನಾಲ್ಡ್ ಟ್ರಂಪ್‌ಗೆ ಸೋಲುಣಿಸಿ ಅಧಿಕಾರಕ್ಕೆ ಬಂದಂದಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರನ್ನೇ ವಿವಿಧ ಇಲಾಖೆಗಳಿಗೆ ನೇಮಿಸಿರುವ ಜೋ ಬೈಡೆನ್ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಭಾರತೀಯರ ಪರ ನಿರ್ಣಯ ತೆಗೆದುಕೊಂಡಿದ್ದಾರೆ. ಹೆಚ್-೧ಬಿ ವಿಸಾ ವಿಚಾರದಲ್ಲಿ ಬೈಡನ್ ಆಡಳಿತ ಇದೀಗ ಮತ್ತೊಂದು ಪ್ರಮುಖ ನಿರ್ಣಯ ತೆಗೆದುಕೊಂಡಿದ್ದು, ಮುಖ್ಯವಾಗಿ ಭಾರತೀಯರಿಗೆ ದೊಡ್ಡ ಉಡುಗೊರೆ ನೀಡಿದಂತಾಗಿದೆ.
ಇಲ್ಲಿನ ತನಕ ಅಮೆರಿಕಾದ ಉದ್ಯೋಗ ವಿಚಾರದಲ್ಲಿ ಆತಂಕದ ಪರಿಸ್ಥಿತಿಯಲ್ಲೇ ಕಾಲ ಕಳೆಯುತ್ತಿದ್ದ ಹೆಚ್-೧ಬಿ ವಿಸಾ ಹೊಂದಿರುವವರು ಇದೀಗ ನಿರಾಳತೆ ಕಂಡಿದ್ದಾರೆ. ಸದ್ಯದ ಬೆಳವಣಿಗೆಯ ಪ್ರಕಾರ, ಹೆಚ್-೧ಬಿ ವಿಸಾ ಹೊಂದಿರುವವರಿಗೆ ಇದೀಗ ಬೈಡೆನ್ ಆಡಳಿತ ಕೆಲಸದ ಅಧಿಕಾರ ಪರವಾನಗಿ ನೀಡಲು ಒಪ್ಪಿಗೆ ಸೂಚಿಸಿದೆ. ಇದರ ಪರಿಣಾಮ ಹೆಚ್-೧ಬಿ ವಿಸಾ ಹೊಂದಿರುವವರು ಸಹಜ ರೂಪದಲ್ಲಿಯೇ ತಮ್ಮ ಕೆಲಸದ ಅಧಿಕಾರದ ಪರವಾನಗಿ ಹೊಂದಲಿದ್ದಾರೆ. ಸಹಜವಾಗಿಯೇ ಇದು ಅಮೆರಿಕಾದಲ್ಲಿ ನೆಲೆಸಿರುವ ವಿಶ್ವಸಮುದಾಯ ಅದರಲ್ಲೂ ವಿಶೇಷವಾಗಿ ಭಾರತೀಯರಿಗೆ ದೊಡ್ಡ ಉಡುಗೆ ನೀಡಿದಂತಾಗಿದೆ. ಈ ವಿಚಾರದಲ್ಲಿ ಅಮೆರಿಕನ್ ಇಮಿಗ್ರೇಶನ್ ಲಾಯರ್ಸ್ ಅಸೋಸಿಯೇಶನ್ (ಎಐಎಲ್‌ಎ) ಸತತವಾಗಿ ಹೋರಾಟ ನಡೆಸಿತ್ತು. ಅಂತಿಮವಾಗಿ ಇದಕ್ಕೆ ಸಂಬಂಧಿಸಿದ ವ್ಯಾಜ್ಯವು ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯೂರಿಟಿಗೆ ತಲುಪಿತ್ತು. ಇದೀಗ ಎಐಎಲ್‌ಎ ಪರವಾಗಿ ತೀರ್ಪು ನೀಡಲಾಗಿದೆ. ಇತ್ತೀಚಿಗಿನ ಕೆಲ ದಿನಗಳಲ್ಲಿ ಹೆಚ್-೧ಬಿ ವಿಸಾ ವಿಚಾರದಲ್ಲಿ ಕ್ರಾಂತಿಕಾರ ಬದಲಾವಣೆಯ ನಿರೀಕ್ಚೆ ಇಟ್ಟುಕೊಳ್ಳಲಾಗಿತ್ತು. ಅದೂ ಅಲ್ಲದೆ ಭಾರತ ಪ್ರಧಾನಿ ನರೇಂದ್ರ ಮೋದಿಯವರು ಸತತವಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿನ ಡೊನಾಲ್ಡ್ ಟ್ರಂಪ್ ಸರಕಾರ ಹಾಗೂ ಸದ್ಯದ ಜೋ ಬೈಡೆನ್ ಜೊತೆಗೆ ಮಾತುಕತೆ ನಡೆಸಿದ್ದರು. ಸದ್ಯ ಮೋದಿಯವರ ಸತತ ಪ್ರಯತ್ನದಿಂದ ಕೂಡ ಇದೀಗ ಫಲಪ್ರದವಾಗಿದೆ ಎಂಬ ಮಾತು ಕೆಲ ಭಾರೀಯರ ಅಮೆರಿಕನ್ ಸಮುದಾಯದಿಂದ ಕೇಳಿಬರುತ್ತಿದೆ.