ಹೆಚ್. ಶಿವಪ್ಪ ಅಭಿಮಾನಿಗಳ ಬಳಗದ ಕಾರ್ಯಕ್ರಮ ಮುಂದೂಡಿಕೆ

ಹರಿಹರ.ನ. 21 ; ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ  ಹೆಚ್. ಶಿವಪ್ಪ ಅಭಿಮಾನಿಗಳ ಸಾಂಸ್ಕೃತಿಕ ಬಳಗದ ಕಾರ್ಯಗಳನ್ನು ಮುಂದೂಡಲಾಗಿದೆ ಎಂದು  ಅಧ್ಯಕ್ಷ ಬಿ.ಚಿದಾನಂದಪ್ಪ ಮಲೆಬೆನ್ನೂರು ತಿಳಿಸಿದ್ದಾರೆ. ಹೆಚ್. ಶಿವಪ್ಪ ಅಭಿಮಾನಿಗಳ ಸಾಂಸ್ಕೃತಿಕ ಬಳಗದಿಂದ ಹರಿಹರ ನಗರದಲ್ಲಿ ಈ ನಾಡಿನ ಹಲವು ಮಹನೀಯರ ಹಾಗೂ ದಾರ್ಶನಿಕರ ಜಯಂತೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈಗಾಗಲೇ ಹಲವು ಸಭೆಗಳನ್ನು  ಮಾಜಿ ಶಾಸಕರಾದ ಎಚ್.ಎಸ್ ಶಿವಶಂಕರ್ ಅವರ ಬಳಗದಿಂದ ನಡೆಸಲಾಗಿದ್ದು.  ಇನ್ನೇನು ಕಾರ್ಯಕ್ರಮದ  ದಿನಾಂಕ ನಿಗದಿ ಮಾಡಬೇಕು ಎನ್ನುವಷ್ಟರಲ್ಲಿ ವಿಧಾನಪರಿಷತ್ ಚುನಾವಣೆ ಘೋಷಣೆಯಾಗಿ  ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಸಭೆಯನ್ನು ಮುಂದೂಡಲಾಗಿದೆ.   ಚುನಾವಣೆ ಮುಗಿದ ನಂತರ ಈ ಎಲ್ಲಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ  ಹಮ್ಮಿಕೊಳ್ಳಲು ಮತ್ತೆ ಬಳಗದ ಸಭೆ ಕರೆದು ದಿನಾಂಕ ನಿಗದಿಗೊಳಿಸಲಾಗುವುದು  ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.