ಹೆಚ್.ಬಿ.ಗಿರೀಶ್ ಗೆ ಚಿನ್ನದ ಪದಕ

ದಾವಣಗೆರೆ.ಏ.೧೬; ನಗರದ ಹೆಚ್.ಬಿ.ಗಿರೀಶ್ ರವರು.ಎಂ.ಎಸ್ಸಿ. ಪ್ರಾಣಿಶಾಸ್ತ್ರ ವಿಭಾಗದಲ್ಲಿ  .ದಾವಣಗೆರೆ.ವಿಶ್ವವಿದ್ಯಾಲಯದಿಂದ ಚಿನ್ನದ  ಪದಕಪಡೆದಿದ್ದಾರೆ ಅವರಿಗೆ  ನಗರದ ಕುರುಬರಕೇರಿ. ಅರಕೇರಮ್ಮ ದೇವಸ್ಥಾನ ಸಮಿತಿ ಹಾಗೂ.ಕುರುಬರ ಕೇರಿ ನಾಗರೀಕ ಸೇವಾಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಿತಿಯ ನಗರಸಭೆ ಮಾಜಿ ಅಧ್ಯಕ್ಷರಾದ ಎಂ.ಮಂಜುನಾಥ್.ಮಾತನಾಡಿ ಗೀರಿಶ್ ಬಹಳಷ್ಟು ಶ್ರಮ ಪಟ್ಟು  ದಾವಣಗೆರೆ ವಿಶ್ವವಿದ್ಯಾಲಯದಿಂದ ಪ್ರಥಮ   ರಾಂಕ್        ಪಡೆದು ನಗರಕ್ಕೆ ಮತ್ತು ಅವರ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ.ಆದ್ದರಿಂದ   ಶ್ರಮಕ್ಕೆ ಪ್ರತಿಫಲ ಇದ್ದೆ ಇರುತ್ತದೆ  ಎಂದರು. ಗಿರೀಶ್ ಇನಷ್ಟು  ಎತ್ತರಕ್ಕೆ ಬೆಳೆದು ಕೀರ್ತಿತರಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಕನಕಪಟ್ಟಣ ಸಹಕಾರ ಬ್ಯಾಂಕ್ ನಿರ್ದೇಶಕ ರಾದ.ಎಂ.ಗೊಣೆಪ್ಪ..ಜಿ.ಎಸ್.ಭರಮರಾಜ್.ಮಾಲತೇಶ್.ಜಮ್ಮನಹಳ್ಳಿ ನಾಗರಾಜ್.ಸಿದ್ದೇಶ್.ಬಳ್ಳಾರಿ ಶೇಖಣ್ಣ..ಲೊಕಣ್ಣ.ರವಿ.ಮುಂತಾದವರು ಉಪಸ್ಥಿತರಿದ್ದರು