ಹೆಚ್ ಡಿ ದೇವೇಗೌಡ ಆರೋಗ್ಯಕ್ಕಾಗಿ ವಿಶೇಷ ಪೂಜೆ

ದಾವಣಗೆರೆ.ಮಾ.೧೦: ಹೆಚ್.ಡಿ. ದೇವೇಗೌಡರ ಕುಟುಂಬ ವರ್ಗದ ಆರೋಗ್ಯಕ್ಕಾಗಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಬೆಳವಣಿಗೆಗಾಗಿ ಅವರು ಅಭಿಮಾನಿ ಬಳಗದಿಂದ ಮಾ.೧೪ ರಂದು ಬೆಳಗಿನ ಜಾವ ೫ ಗಂಟೆಗೆ  ನಗರದ ಆನೆಕೊಂಡದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಮಾಜಿ ಜೆಡಿಎಸ್ ನ  ಸದಸ್ಯೆ ಶಾಮನೂರು ಗೀತಾ ಮುರುಗೇಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೊತೆಗೆ ರಾಜ್ಯದ ದೀನ, ದಲಿತ ಜನಾಂಗದ ಮತ್ತು ಸರ್ವ ಜನರ ಕಲ್ಯಾಣಕ್ಕೋಸ್ಕರ    ದಾವಣಗೆರೆಯ ಅಭಿಮಾನಿಗಳಿಂದ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಅಂದು  ಕುಮಾರಸ್ವಾಮಿ ಯವರ ರಾಜಕೀಯ ಏಳಿಗೆಗಾಗಿ ಗಣೇಶ ಮತ್ತು ಈಶ್ವರ ದೇವರಿಗೆ ಲೋಕಕಲ್ಯಾಣಾರ್ಥವಾಗಿ ಶಿವಲಿಂಗದ ಮೇಲೆ ಜೇನು ಮಿಶ್ರಿತ ಗಂಗಾಜಲಾಭಿಷೇಕದೊಂದಿಗೆ ನವಗ್ರಹ  ಪೂಜೆ, ಹೋಳಿಗೆ ಪೂಜೆ, ಬುತ್ತಿ ಪೂಜೆ ಮತ್ತು ಆ ದಿನದಂದು ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಪೂಜೆಯಲ್ಲಿ  ಜಿಲ್ಲಾ ಜಾತ್ಯತೀತ ಜನತಾದಳ ಪದಾಧಿಕಾರಿಗಳು, ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ವಿ.ಕೆ. ಶಾಸ್ತ್ರೀ ಉಪಸ್ಥಿತರಿದ್ದರು.