ಹೆಚ್.ಕೆ.ಪಾಟೀಲರಂತಹಉತ್ತಮ ರಾಜಕಾರಣಿ ಸಮಾಜಕ್ಕೆ ಬೇಕು: ಅಲ್ಲಂ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ.7- ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ.ಪಾಟೀಲ್ ರಂತಹ ಉತ್ತಮ‌ ರಾಜಕಾರಣಿ ಸಮಾಜಕ್ಕೆ ಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಹೇಳಿದ್ದಾರೆ.
ಅವರು ನಿನ್ನೆ ಗದಗ ನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ರಾಜ್ಯದ ಅನೇಕ ನಗರ, ಪಟ್ಟಗಳು ಹೊಂದಿರದೇ ಇರುವ ಒಳ ಚರಂಡಿ ವ್ಯವಸ್ಥೆಯನ್ನು ಹುಲಕೋಟಿಯಲ್ಲಿ ಮಾಡಿ ದೇಶದ ಗಮನ ಸೆಳೆದಿದ್ದರು. ಸಹಕಾರ ಕ್ಷೇತ್ರದ ಮೂಲಕ ಗದಗ ಕ್ಷೇತ್ರವನ್ನು ಅವರ ತಂದೆ ಮತ್ತು ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಇಂದಿನ ಭ್ರಷ್ಟ ರಾಜಕಾರಣದಲ್ಲಿ ಸಜ್ಜನಿಕೆಯ ಮೂರ್ತಿಯಂತೆ ಇರುವ ಹೆಚ್.ಕೆ.ಪಾಟೀಲರಂತಹ ಸಜ್ಜನಿಕೆಯ, ಬುದ್ದಿವಂತ ರಾಜಕಾರಣಿಗಳು ವಿಧಾನಸೌಧದಲ್ಲಿದ್ದರೇನೆ ಅರ್ಥ ಎಂದು. ಮತ್ತೊಮ್ಮೆ ಪಾಟೀಲರನ್ನು, ನಿಮ್ಮ ಕ್ಷೇತ್ರದ ಗೌಡರನ್ನು ಗೆಲಿಸಿ ಎಂದು ಮತದಾರರಿಗೆ ಮನವಿ ಮಾಡಿದರು.
ಸಭೆಯಲ್ಲಿ ಅಭ್ಯರ್ಥಿ ಹೆಚ್.ಕೆ.ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಇದ್ದರು.

One attachment • Scanned by Gmail