ಹೆಚ್.ಐವಿ ಪೀಡಿತರಿಗೆ ಫುಡ್ ಕಿಟ್ ವಿತರಣೆ

ಚಿತ್ರದುರ್ಗ, ಜೂ.2 ; ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆವರಣದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು, ಕೋವಿಡ್ ಸಂಕಷ್ಟದಲ್ಲಿರುವ ಹೆಚ್.ಐ.ವಿ. ಪೀಡಿತರು, ಅಡುಗೆ ಕೆಲಸಗಾರರು, ದೇವಸ್ಥಾನಗಳ ಅರ್ಚಕರು, ವಿವಿಧೆಡೆ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು ಸೇರಿದಂತೆ 110ಜನರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದರು. ಇಂದಿನ ದವಸ ಧಾನ್ಯ ದಾಸೋಹವನ್ನು ಶ್ರೀಮತಿ ಪಾರ್ವತಮ್ಮ ಮತ್ತು ಜಯಣ್ಣ, ಇಂಜಿನಿಯರ್, ಬೆಂಗಳೂರು ಹಾಗು ಕಡೂರು  ವೀರಭದ್ರಸ್ವಾಮಿ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಹೆಚ್.ಎಂ. ದಯಾನಂದಸ್ವಾಮಿ ಇವರು ವಹಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕರ‍್ಯದರ್ಶಿ ಎ.ಜೆ.ಪರಮಶಿವಯ್ಯ, ಪಟೇಲ್ ಶಿವಕುಮಾರ್, ಸಿದ್ದಾಪುರ ನಾಗಣ್ಣ, ಪೈಲ್ವಾನ್ ತಿಪ್ಪೇಸ್ವಾಮಿ ಮೊದಲಾದವರಿದ್ದರು.