ಹೆಚ್.ಎಸ್.ಕೆ ಪಾಲಿಟೆಕ್ನಿಕ್‍ನಲ್ಲಿ ಸಿಬ್ಬಂದಿಗಳಿಗೆ  ತರಬೇತಿ ಕಾರ್ಯಗಾರ 

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.17:  ಬಳ್ಳಾರಿಯ ವೀ ವಿ ಸಂಘದ ಅಂಗ ಸಂಸ್ಥೆಯಾದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್‍ನಲ್ಲಿ ಕಂಪ್ಯೂಟರ್ ಸೈನ್ಸ್  ವಿಭಾಗದ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಹೊಸ ಪಠ್ಯಕ್ರಮ ಸಿ-20 ಆಧಾರಿತ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರ್.ವೈ.ಎಂ.ಇ.ಸಿ ಕಾಲೇಜ್ ನ  ಕಂಪ್ಯೂಟರ್ ಸೈನ್ಸ್  ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಚಿದಾನಂದ ಹೆಚ್ , ಬಿ ವೀರೇಶ್ ಗೌಡ ಮತ್ತು ಪ್ರಸನ್ನ ಕುಮಾರ್ ಎಸ್ ಶಿವಾರೆಡ್ಡಿ ಆಗಮಿಸಿದ್ದರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೆಚ್.ಎಂ.ಕಿರಣ್‍ಕುಮಾರ್ ಹಾಗೂ ಉಪ ಪ್ರಾಂಶುಪಾಲರಾದ ಶ್ರೀಮತಿ ಕೆ.ಗೌಸೀಯಾ ಬೇಗಂ  ಆಡಳಿತ  ಮಂಡಳಿಯ ಸದಸ್ಯರಾದ  ಹಲಕುಂದಿ ವಿಜಯಕುಮಾರ್, ಎ.ವೀರನಗೌಡ, ಸಂಗನಕಲ್ ಚಂದ್ರಶೇಖರ್ , ಕಂಪ್ಯೂಟರ್ ಸೈನ್ಸ್  ವಿಭಾಗಾಧಿಕಾರಿ ಎಸ್ ನಾಗರಾಜ್  ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ,  ಸಿಬ್ಬಂದಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಮಾತನಾಡುತ್ತಾ ತಾಂತ್ರಿಕ ವಿಷಯದಲ್ಲಿ ಪ್ರಾಯೋಗಿಕ ವಿಷಯಕ್ಕೆ ಹೆಚ್ಚುಮಹತ್ವ ಅದರಿಂದ ತಾಂತ್ರಿಕ ವಿಷಯದಲ್ಲಿ  ಹೊಸ ಹೊಸ ಅನ್ವೇಷಣೆ ಮತ್ತು ಅದರ ಪ್ರಯೋಗ ನಡೆಯುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದಲ್ಲಿ ಕಲಿಕೆಯ  ಮಹತ್ವವನ್ನು ತಿಳಿಸಿ ಅದನ್ನು ಆಳವಡಿಸಿಕೊಳ್ಳಲು  ಮಾರ್ಗದರ್ಶನ ನೀಡಬೇಕೆಂದು ಕರೆ ನೀಡಿದರು. ಕಾಲೇಜಿನ ಅಧ್ಯಕ್ಷರು ಮಾತನಾಡುತ್ತಾ ಹೇಗೆ ದಿನ ದಿನಕ್ಕೆ ಆಧುನಿಕ ತಾಂತ್ರಿಕತೆ ಬದಲಾಗುತ್ತದೆಯೋ ಹಾಗೆ. ಅದಕ್ಕೆ ಸಿಬ್ಬಂದಿಗಳು ತಮ್ಮ ನೈಪುಣ್ಯತೆ, ಉನ್ನತೀಕರಣ  ಬಹಳ ಮುಖ್ಯ ಹಾಗೂ ಹೊಸ ಆವಿಷ್ಕಾರಗಳು ಈ ಆಧುನಿಕ ಜೀವನಕ್ಕೆ ಮುಖ್ಯ ಎಂದು ತಿಳಿಸಿದರು. ಉಪ ಪ್ರಾಂಶುಪಾಲರು ಮಾತನಾಡುತ್ತಾ, ಜೀವನದಲ್ಲಿ ನಿರಂತರ ಕಲಿಕೆ ಬಹಳ ಮುಖ್ಯ. ಕಂಪ್ಯೂಟರ್ ವಿಭಾಗಾಧಿಕಾರಿಯಾದ ಎಸ್.ನಾಗರಾಜ್‍ರವರು ಮಾತನಾಡುತ್ತಾ  ಕಲಿಕೆ ಸಮಾಜ ಮತ್ತು ದೇಶದ ಅಭಿವೃದ್ದಿಯ ಸಂಕೇತವಾಗಿದೆ ಎಂದು ತಿಳಿಸಿದರು . ಈ ಕಾರ್ಯಕ್ರಮವನ್ನು ಕಂಪ್ಯೂಟರ್ ವಿಭಾಗದ ಉಪನ್ಯಾಕಿಯಾದ ಪ್ರಿಯಾಂಕ  ನಡೆಸಿಕೊಟ್ಟರು.