ಹೆಚ್ ಎಲ್ ಸಿ ಕಾಲುವೆಗೆ ಬೊಂಗಾ

ಬಳ್ಳಾರಿ ಜು 25 : ತುಂಗಭದ್ರ ಬಲದಂಡೆ ಮೇಲ್ಮಟ್ಟದ (ಹೆಚ್ ಎಲ್ ಸಿ) ಕಾಲಯವೆಗೆ ಬೊಂಗಾ ಬಿದ್ದಿದೆ.
ಸಂಡೂರು ತಸಲೂಕಿನ ದರೋಜಿ ಬಳಿ ಕಾಲುವೆಯ 24 ನೇ ಕಿಲೋ ಮೀಟರ್ ಬಳಿ ಬೊಂಗಾ ಬಿದ್ದಿದೆ.


ಬೋಂಗಾ ಬಿದ್ದಿರುವ ಲಕ್ಷಣಗಳನ್ನು ಕಂಡರೆ ಕಾಲುವೆ ದಂಡೆಗೆ ಹಾಕಿದ ಕಾಂಕ್ರೀಟ್ ಲೈನಿಂಗ್ ನ ಕಳಪೆ ಕಾಮಗಾರಿ ಕಸರಣ ಇರಬಹುದೆಂದು ಅಂದಾಜಿಸಬಹುದಾಗಿದೆ. ಕಾಲುವೆಗೆ ಬೊಂಗಾ ಬಿದ್ದಿರುವುದರಿಂದ ಕಾಲುವೆಗೆ ನೀರು ಬಿಡುವುದನ್ನು ಕಡಿಮೆ ಮಾಡಲಾಗಿದೆ. ಬೊಂಗಾ ಬಿದ್ದಿರುವುದು ಹಳ್ಳಕ್ಕೆ ನಿರ್ಮಿಸಿರುವ ಅಕ್ವಡಕ್ಟ್ ಬಲಿ ಇದರಿಂದ ನೀರು ಹಳ್ಳಕ್ಕೆ ಹರಿದುಕೊಂಡು ಹೋಗುತ್ತಿದೆ.