
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.03: ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆ ರಕ್ಷಣೆಗಾಗಿ ನ 15 ವರೆಗಾದರೂ ಹೆಚ್.ಎಲ್.ಸಿ.ಕಾಲುವೆಗೆ ನೀರು ಹರಿಸಲು ಪ್ರಯತ್ನಿಸಲಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ತುಂಗಭದ್ರ ಹೆಚ್.ಎಲ್.ಸಿ.ಕಾಲುವೆ ವ್ಯಾಪ್ತಿಯಲ್ಲಿ 50 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಮೆಣಸಿಕಾಯಿ ಬೆಳೆದಿದೆ. ಈ ಮೊದಲು ಈ ಕಾಲುವೆಗೆ ನ 30 ರ ವರೆಗೆ ನೀರು ಹರಿಸಲಿದೆಂದು ಹೇಳಿತ್ತು. ಆದರೆ ಮಳೆ ಸಾಕಷ್ಟು ಬೀಳದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿದ್ದಿದ್ದರಿಂದ ನ 10 ವರೆಗೆ ನೀಡಲಿದೆಂದು ನಂತರ ಹೇಳಿತ್ತು. ಹೀಗಾದರೆ ಬೆಳೆ ನಷ್ಟವಾಗಲಿದೆಂದು ರೈತರು ಮನವರಿಕೆ ಮಾಡಿದ್ದಾರೆ. ಅದಕ್ಕಾಗಿ ಮುನಿರಾಬಾದಿನಲ್ಲಿ ನಿನ್ನೆ ಸಂಜೆ ಮುಖ್ಯ ಇಂಜಿನೀಯರ್ ಬಸವರಾಜ್ ಅವರನ್ನು ಭೇಟಿ ಮಾಡಿ. ಮಾಹಿತಿ ಪಡೆದು. ಹೇಗಾದರೂ ಮಾಡಿ ಕನಿಷ್ಟ ನ.15 ರವರಗೆ ನೀರು ಹರಿಸುವ ಕುರಿತು ಚರ್ಚೆ ಮಾಡಿದೆ.
ಜಲಾಶಯದ ಮೇಲ್ಭಾಗದಲ್ಲಿ ಒಂದಿಷ್ಟು ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಿದೆ. ಬಂದರೆ ನೆರವಾಗಲಿದೆಂದರು.
ಒಟ್ಟಾರೆ ಆದಷ್ಟು ರೈತರ ಸಂಕಷ್ಟ ಅರಿತು ನೀರು ಬಿಡುವ ಪ್ರಯತ್ನ ನಡೆದಿದೆ. ಆಂದ್ರದ ಪಾಲಿನಒಂದಿಷ್ಟು ನೀರನ್ನು ನಾವುಬಳಸಿಕೊಳ್ಳಲು ಆ ರಾಜ್ಯದ ಜೊತೆ ಸಂಪರ್ಕ ಮಾಡಲಿದೆಂದರು.