ಹೆಚ್‍ಐವಿ ಏಡ್ಸ್ ಮಾಹಿತಿ: ತರಬೇತಿ ಕಾರ್ಯಾಗಾರ

ಗದಗ,ಜ13: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತÀ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್‍ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರ ಸಭೆ ಸಭಾಭವನದಲ್ಲಿ ಜಿಲ್ಲೆಯ ಪ್ಯಾನಲ್ ವಕೀಲರಿಗೆ ಹೆಚ್‍ಐವಿ ಏಡ್ಸ್ ಮಾಹಿತಿ ಹಾಗೂ ಹೆಚ್‍ಐವಿ ಕಾಯ್ದೆ 2017 ರ ಕುರಿತು ತರಬೇತಿ ಕಾರ್ಯಾಗಾರ ಜರುಗಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೆಚ್.ಐ.ವಿ ಏಡ್ಸ್ ಕಾಯ್ದೆ ಜಾರಿಯಾಗಿದ್ದು, ಹೆಚ್.ಐ.ವಿ.ಯೊಂದಿಗೆ ಬದುಕುತ್ತಿರುವ ವ್ಯಕ್ತಿಗಳಿಗೆ ಸಾರ್ವಜನಿಕ ಕ್ಷೇತ್ರ ಹಾಗೂ ಖಾಸಗಿ ಕ್ಷೇತ್ರದಲ್ಲಿ ಹೆಚ್.ಐ.ವಿ ಸಂಬಂಧಿತ ತಾರತಮ್ಯದ ವಿರುಧ್ಧ ಕಾನೂನಿನ ರಕ್ಷಣೆ ನೀಡಿದೆ. ಯಾವುದೇ ಹೆಚ್.ಐ.ವಿ ವ್ಯಕ್ತಿಗೆ ಕಳಂಕ ತಾರತಮ್ಯ ಮಾಡಿದರೆ, ಗೌಪ್ಯತೆಯನ್ನು ಕಾಪಾಡದಿದ್ದರೆ, ಉದ್ಯೋಗದಲ್ಲಿ ತಾರತಮ್ಯ ಮಾಡಿದರೆ, ಶಿಕ್ಷಣ ಆರೋಗ್ಯ ಸಾರ್ವಜನಿಕ ಸೌಲಭ್ಯವನ್ನ ನಿರಾಕರಿಸಿದರೆ, 3 ತಿಂಗಳಿಗೂ ಕಡಿಮೆ ಇಲ್ಲದ 1 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷರೂ ದಂಡ ವಿಧಿಸಬಹುದಾಗಿದೆ ಆದ್ದರಿಂದ ಹೆಚ್.ಐ.ವಿ. ಸೋಂಕಿತರು ಹಾಗೂ ಬಾಧಿತರೊಂದಿಗೆ ಸೌಜನ್ಯದಿಂದ ವರ್ತಿಸಿ ವಿವಿಧ ಇಲಾಖೆಗಳ ಸೇವೆಗಳನ್ನು ಸೋಂಕಿತರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ ಬಸರಿಗಿಡದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಹೆಚ್.ಐ.ವಿ ಕಾರ್ಯಕ್ರಮ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯಗತಗೊಂಡಿದ್ದು, ಹೆಚ್.ಐ.ವಿ ಸೋಂಕಿತ ಗರ್ಭೀಣಿ ಮಹಿಳೆಯಿಂದ ಹುಟ್ಟಿದ ಮಕ್ಕಳು ಹೆಚ್.ಐ.ವಿ.ಯಿಂದ ಮುಕ್ತವಾಗಿದ್ದು ಉತ್ತಮ ಪ್ರಗತಿಯಾಗಿದೆ ಎಂದರು.
ಜಿಲ್ಲೆಯಲ್ಲಿ 9 ಐಸಿಟಿಸಿ ಕೇಂದ್ರಗಳಿದ್ದು ಹೆಚ್.ಐ.ವಿಗೆ ಸಂಬಂಧಿಸಿದ ಆಪ್ತಸಮಾಲೋಚನೆ ಮತ್ತು ಪರೀಕ್ಷೆಯನ್ನು ಉಚಿತವಾಗಿ ಮಾಡುತ್ತಿದ್ದು, ಏ.ಆರ್.ಟಿ. ಕೇಂದ್ರದಲ್ಲಿ ಔಷದೊಪಚಾರ ಲಭ್ಯವಿರುತ್ತದೆ. ಹಾಗೂ ರಾಜ್ಯದಲ್ಲಿ ಜಿಲ್ಲೆಯು ಹೆಚ್.ಐ.ವಿ ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಹೆಚ್.ಐವಿ ಸೋಂಕಿನ ಪ್ರಮಾಣ 0.03% ಇದ್ದು, ಹೆಚ್.ಐ.ವಿ. ಸೋಂಕನ್ನು ಶೂನ್ಯಕ್ಕೆ ತರುವಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ವಕೀಲರಾದ ಕುಮಾರ ಹೆಚ್.ಐ.ವಿ. ಕಾಯ್ದೆ ಕುರಿತು ತರಬೇತಿ ನೀಡಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಆರೋಗ್ಯ ಇಲಾಖೆ ಐಸಿಟಿಸಿ ಮೇಲ್ವಿಚಾರಕ ಬಸವರಾಜ ಲಾಲಗಟ್ಟಿ ಹೆಚ್‍ಐವಿ ಸೋಂಕಿತರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೂ ಜಿಲ್ಲೆಯಲಿ ್ಲದೊರೆಯುವ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿದರು. ಸರ್ಕಾರದ ಯೋಜನೆಗಳಾದ ಅನ್ನ ಅಂತ್ಯೋದಯ ಯೋಜನೆ, ವಿಶೇಷ ಪಾಲನಾ ಯೋಜನೆ, ವಸತಿ ಸೌಲಭ್ಯ, ಧನಶ್ರೀ ಯೋಜನೆ, ಚೇತನಾಯೋಜನೆ, ಮೈತ್ರಿಯೋಜನೆ, ಉಚಿತ ಕಾನೂನು ಸೇವೆ ಹಾಗೂ ಮೂಲಭೂತ ತರಬೇತಿಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ, ನಗರಸಭೆ ಆಯುಕ್ತ ರಮೇಶಜಾಧವ, ಡ್ಯಾಪ್ಕ್ಯೂ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ನಗರಸಭೆ ಮ್ಯಾನೇಜರ ವಿ.ಬಿ. ಮುತಗಾರ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಾಗೂ ನಗರಸಭೆ ಸಿಬ್ಬಂದಿಗಳು ಹಾಜರಿದ್ದರು. ಎಸ್.ಎಸ್. ನೀಲಗುಂದ ಸ್ವಾಗತಿಸಿದರು, ಬಸವರಾಜ ಲಾಲಗಟ್ಟಿ ನಿರೂಪಿಸಿದರು, ಬಿ.ಎಮ್. ಕುಕÀನೂರ ವಂದಿಸಿದರು.