ಹೆಚ್‌ಪಿಎಸ್ ಕಾಲೇಜಿನಲ್ಲಿ ಗ್ರಾ.ಪಂ ಮತಯಂತ್ರಗಳ ಕಾವಲು ಕಾವಲು ಕಾಯುತ್ತಿರುವ ಪೊಲೀಸ್ ಸಿಬ್ಬಂದಿ

ಹರಪನಹಳ್ಳಿ.ಡಿ.೨೯;  ತಾಲ್ಲೂಕಿನ 35 ಗ್ರಾಮ ಪಂಚಾಯ್ತಿಗಳಿಗೆ  ನಡೆದ ಚುನಾವಣೆಯ ಮತಯಂತ್ರಗಳನ್ನು ಪಟ್ಟಣದ ಹೆಚ್‌ಪಿಎಸ್ ಕಾಲೇಜ್‌ನಲ್ಲಿ ಇಡಲಾಗಿದೆ. ಕಾಲೇಜಿನ ಇಡೀ ಕಟ್ಟಡಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಕಳೆದ ಚುನಾವಣೆಯಲ್ಲೂ ಇದೇ ಕಾಲೇಜಿನಲ್ಲಿ ಮತಯಂತ್ರಗಳನ್ನು ಇರಿಸಲಾಗಿದ್ದು, ಕೊಠಡಿಗಳಿಗೆ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮತ ಎಣಿಕೆಗೆ ಒಟ್ಟು 18 ರೂಂಗಳ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, 78 ಟೇಬಲ್ ಹಾಕಿದ್ದು, ಇದರಲ್ಲಿ 72 ಬಳಕೆ ಮತ್ತು 6 ಟೇಬಲ್ ಕಾಯಿದಿರಿಸಲಾಗಿದೆ. ಒಂದು ಟೇಬಲ್ ಮೂರು ಜನ ಒಟ್ಟು 234 ಸಿಬ್ಬಂದಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿಯೊಂದು ಕೊಠಡಿಯಲ್ಲಿ 2 ಗ್ರಾ.ಪಂಗಳ ಮತ ಎಣಿಕೆ ಕಾರ್ಯ ನಡೆಯಲಿದ್ದು, 4 ಟೇಬಲ್‌ಗಳು ಇರಲಿವೆ. ಡಿ.30ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದೆ ಎಂದು ತಹಶೀಲ್ದಾರ್ ಎಂ.ಎಲ್.ನಂದೀಶ್ ಮಾಹಿತಿ ನೀಡಿದ್ದಾರೆ. 
ತಾಲ್ಲೂಕಿನ ಒಟ್ಟು 35 ಗ್ರಾ.ಪಂಗಳಿಗೆ 280 ಮತಗಟ್ಟೆಗಳ ಮೂಲಕ 559 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 82553 ಪುರುಷ, 76450 ಮಹಿಳೆಯರು ಸೇರಿ ಒಟ್ಟು 1,59,003 ಮತದಾರರು ತಮ್ಮ ಹಕ್ಕು ಚಲಾಯಿದ್ದು, ಶೇ.83.66ರಷ್ಟು ಮತದಾನವಾಗಿದೆ. 1369 ಅಭ್ಯರ್ಥಿಗಳು ಭವಿಷ್ಯ ನಿರ್ಧಾರವಾಗಲಿದೆ.