ಹೆಚ್‌ಡಿಡಿ ಆಶೀರ್ವಾದ ಪಡೆದ ಮಂಜುನಾಥ್

ಕೋಲಾರ,ಮೇ,೧೮-ರಾಜ್ಯದ ೧೯ ಜೆಡಿಎಸ್ ಶಾಸಕರ ಪೈಕಿ ಏಕೈಕ ಎಸ್ಸಿ ಸಮುದಾಯದಕ್ಕೆ ಸೇರಿದ ಮುಳಬಾಗಿಲು ಕ್ಷೇತ್ರದ ನೂತನ ಶಾಸಕ ಸಮೃದ್ದಿ ಮಂಜುನಾಥ್ ಬೆಂಗಳೂರಿನ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆರ್ಶೀವಾದ ಪಡೆದುಕೊಂಡರು.
ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರನ್ನು ಭೇಟಿ ಮಾಡಿ .ಹೆಚ್.ಡಿ. ದೇವೇಗೌಡ ಮಾತನಾಡಿ, ಪ್ರಪ್ರಥಮಬಾರಿಗೆ ಶಾಸಕರಾಗಿರುವ ನೀವು ವಿರೋಧ ಪಕ್ಷದಲ್ಲಿ ಕುಳಿತು ನಿಮ್ಮ ಕ್ಷೇತ್ರದ ಅಭಿವೃದ್ದಿಗೆ ಗಮನ ಸೆಳೆಯಬೇಕು, ಮುಂದಿನ ದಿನಗಳಲ್ಲಿ ನಿಮಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ರಾಜಕೀಯವಾಗಿ ಅವಕಾಶ ಸಿಗುತ್ತದೆ ಎಂದು ಸಮೃದ್ದಿ ಮಂಜುನಾಥ್‌ಗೆ ಹಾರೈಸಿದರು.