ಹೆಚ್‌ಡಿಕೆ ಆರೋಪಕ್ಕೆ ತಕ್ಕ ಉತ್ತರ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೬:ಬಿಬಿಎಂಪಿ ಕಾಮಗಾರಿಗಳ ಹಣ ಬಿಡುಗಡೆಗೆ ಕಮಿಷನ್ ಪಡೆಯಲಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ತಕ್ಕ ಉತ್ತರ ಕೊಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಆರೋಪಕ್ಕೆ ಮಧ್ಯಮಗಳ ಮುಂದೆ ಉತ್ತರ ನೀಡಿದರೆ ಸಾಲದು, ಅವರು ಪ್ರಧಾನಮಂತ್ರಿವರೆಗೂ ಹೋಗಲಿ, ಅದಕ್ಕೆ ತಕ್ಕಂತೆ ಉತ್ತರ ಕೊಡುತ್ತೇನೆ ಎಂದರು.
ನೈಸ್ ಹಗರಣ ಬಗ್ಗೆ ಕುಮಾರಸ್ವಾಮಿ ಮಾಡಿರುವ ಆರೋಪ ನನ್ನ ಗಮನಕ್ಕೆ ಬಂದಿದೆ. ಎಲ್ಲದಕ್ಕೂ ಸದ್ಯದಲ್ಲೆ ಉತ್ತರ ಕೊಡುತ್ತೇನೆ. ಅವರು ನೈಸ್ ಹಗರಣದ ಬಗ್ಗೆ ಪ್ರಧಾನಿಗಳಿಗೆ ದಾಖಲಾತಿ ನೀಡುವುದಾಗಿ ಹೇಳಿದ್ದಾರೆ. ಆಗ ಇದಕ್ಕೆಲ್ಲ ಸರಿಯಾದ ಉತ್ತರ ನೀಡಲೇಬೇಕಾಗುತ್ತದೆ ಎಂದರು.
ನಾಳೆಯಿಂದ ನಾನು ಮುಖ್ಯಮಂತ್ರಿಯವರು ವಿವಿಧ ಜಿಲ್ಲೆಗಳ ಶಾಸಕರು ಮತ್ತು ಮುಖಂಡರ ಜತೆ ಸಭೇಗಳನ್ನು ನಡೆಸುತಿದ್ದೇನೆ ಕೆಲವು ಸಮುದಾಯದವರ ಮುಖಂಡರ ಜತೆ ಚರ್ಚೆ ಮಾಡಬೇಕಾಗುತ್ತದೆ, ಇಂದು ಅಲ್ಪ ಸಂಖ್ಯಾತ ನಾಯಕರ ಜತೆ ಸಭೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.