ಹೆಚ್ಚೆಚ್ಚು ಶಿಕ್ಷಣ ಪಡೆಯಿರಿ

ವಿಜಯಪುರ:ಡಿ.7:ಕರ್ನಾಟಕ ಬುದ್ಧ ಎಜ್ಯುಕೇಶನ ಸಮಿತಿಯ ಸಿದ್ಧಾರ್ಥ ಹಿರಿಯ ಪ್ರಾಥಮಿಕ ಹಾಗೂ ಸಿದ್ದಾರ್ಥ ಪ್ರೌಢಶಾಲೆಯಲ್ಲಿ ಅಂಬೇಡ್ಕರ್ ಮಹಾ ಪರಿ ನಿರ್ವಾಹಣ ದಿನ ಆಚರಿಸಲಾಯಿತು.

ಶಾಲೆಯ ಸಂಸ್ಥಾಪಕ ತುಕಾರಾಮ ಚಂಚಲÀ್ರ ಅವರು ಮಾತನಾಡಿ, ಬಾಬಾ ಸಾಹೇಬರು ಬಹಳಷ್ಟು ಪದವಿ ಪಡೆದಿದ್ದು 9 ಭಾಷೆ ಬರೆಯುತ್ತಿದ್ದರು ಮತ್ತು ಮಾತನಾಡುತ್ತಿದ್ದರು. ಅದಕ್ಕೆ ತಾವು ಕನ್ನಡ ಮಾತೃಭಾಷೆಯನ್ನು ಚೆನ್ನಾಗಿ ಮಾತನಾಡಬೇಕು. ಎಷ್ಟು ಸಾಧ್ಯ ಅದಷ್ಟು ಶಿಕ್ಷಣ ಕಲಿಯಬೇಕು. ಇದಕ್ಕೆ ಸರ್ಕಾರದವರು ಸಾವಿರ ಕೋಟಿ ವೆಚ್ಚ ಮಾಡುವುದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಸಿದ್ದಾರ್ಥ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಮಾತೆಯರಾದÀ ವೀಣಾ ಎನ್. ಶಿರಗುಪ್ಪಿ ಅವರು, ಬಾಬಾ ಸಾಹೇಬರ ಮಹಾ ಪರಿ ನಿರ್ವಾಣ ದಿನ ಜಗತ್ತಿನ 193 ರಾಷ್ಟ್ರಗಳು ಅರ್ಧ ಧ್ವಜವನ್ನು ಧ್ವಜಾರೋಹಣ ಮಾಡಿ ಮಹಾಪರಿ ನಿರ್ವಾಣ ದಿನಾಚರಣೆ ಮಾಡಿರುತ್ತಾರೆ. ಇನ್ನುವರಿಗೆ ಯಾರಿಗೂ ಈ ರೀತಿ ಮಾಡಿರುವುದಿಲ್ಲ ಎಂದರು.

ಈ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿಯರಾದ ಪಿ.ಎಮ್. ಕಲಬುರ್ಗಿ, ಎ. ಎಸ್. ಜೀವಜಿ, ಅಶ್ವಿನಿ ನಾಯಕ ಹಾಗೂ ಸಹ ಶಿಕ್ಷಕರಾದ ಸಿ. ಎಚ್. ಈಟಿ, ಎಸ್. ಆರ್. ಫುಲಾರಿ, ಆರ್. ಡಿ. ಯಾರವಳ್ಳಿ, ಎಸ್.ಎಸ್. ಬಸರಗಿ ಅವರು ಉಪಸ್ಥಿತರಿದ್ದರು.