ಹೆಚ್ಚು ಸೋಂಕು ಪ್ರಕರಣ ದಾಖಲು

ನವದೆಹಲಿ,ಏ.೧೭ – ದೇಶದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ೬೧,೫೦೦ ಕ್ಕೂ ಹೆಚ್ಚು ಹೊಸ ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ
ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಮತ್ತು ಸಾವಿನ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಕೊರೊನಾ ಸೋಂಕಿನಿಂದ ೨೪ ಮಂದಿ ಸಾವನ್ನಪ್ಪಿದ್ದು ಆತಂಕಕ್ಕೆ ಗುರಿ ಮಾಡಿದೆ.
ದೆಹಲಿ ಮತ್ತು ಅದರ ನೆರೆಯ ರಾಜ್ಯಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿರುವುದರಿಂದ ದೆಹಲಿ ಸರ್ಕಾರಕ್ಕೆ ಆತಂಕ ಆಗಿ ಹೊರಹೊಮ್ಮಿವೆ
ಕಳೆದ ಕೆಲವು ದಿನಗಳಿಂದ ದೆಹಲಿ ಕೊರೊನಾ ಸೋಂಕಿನ ಹಾಟ್‌ಸ್ಪಾಟ್ ಆಗಿ ಪರಿವರ್ತನೆ ಆಗಿದೆ.
ಕಳೆದ ಏಳು ದಿನಗಳಲ್ಲಿ, ದೆಹಲಿಯಲ್ಲಿ ಕೋವಿಡ್‌ಗೆ ಸಂಬಂಧಿಸಿದ ೨೪ ಸಾವುಗಳನ್ನು ವರದಿಯಾಗಿದ್ದು ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆ ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರ ಜೊತೆಗೆ ವಾರದ ಅವಧಿಯಲ್ಲಿ ದೇಶದಲ್ಲೇ ಅತಿ ಹೆಚ್ಚು ಮತ್ತು ೭,೬೬೪ ರಲ್ಲಿ ಎರಡನೇ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಈ ಅವಧಿಯಲ್ಲಿ ನೆರೆಯ ಹರಿಯಾಣದಲ್ಲಿ ೪,೫೫೪ ಹೊಸ ಪ್ರಕರಣಗ ದಾಖಲಿಸಿದೆ, ದೇಶದಲ್ಲಿ ನಾಲ್ಕನೇ ಅತಿ ಹೆಚ್ಚು ಸೋಂಕಿನ ಸಂಖ್ಯೆಯಾಗಿದೆ ಎಂದು ಹೇಳಿದೆ.
ಉತ್ತರ ಪ್ರದೇಶದಲ್ಲಿ ೩,೩೩೨ ನೊಂದಿಗೆ ೫ ನೇ ಸ್ಥಾನದಲ್ಲಿದೆ. ಪ್ರಕರಣಗಳಲ್ಲಿ ನಾಲ್ಕು ಪಟ್ಟು ಏರಿಕೆಯೊಂದಿಗೆ ರಾಜಸ್ಥಾನ ೧೪ ಸಾವುಗಳನ್ನು ವರದಿ ಮಾಡಿದೆ, ದೆಹಲಿ ಮತ್ತು ಮಹಾರಾಷ್ಟ್ರ ೧೯ ನಂತರ ವಾರದಲ್ಲಿ ಮೂರನೇ ಅತಿ ಹೆಚ್ಚು ಸಾವಿನ ಸಂಖ್ಯೆ ಇದಾಗಿದೆ.
ಹಿಂದಿನ ಏಳು ದಿನಗಳ ಅವಧಿಯಲ್ಲಿ ೩೪,೦೧೧ ಪ್ರಕರಣಗಳು ದಾಖಲಾಗಿದ್ದವು. ಕಳೆದ ವಾರ ಶೇ. ೮೧ ರಷ್ಡು ಪ್ರಕರಣಗಳು ಹೆಚ್ಚಾಗಿದೆ ಮತ್ತು ಕಳೆದ ವರ್ಷದ ಆಗಸ್ಟ್ ಅಂತ್ಯದ ನಂತರದ ಗರಿಷ್ಠ ಏಳು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕು ಕಾಣಿಸಿಕೊಂಡಿದೆ.