ಹೆಚ್ಚು ಮರಗಳನ್ನು ಬೆಳೆಸಿ: ಪವಾಡಶೆಟ್ಟಿ

ಲಕ್ಷ್ಮೇಶ್ವರ, ಜೂ7: `ಹಸಿರು ಇಲ್ಲದಿದ್ದರೆ ಪ್ರಾಣಿ, ಪಕ್ಷಿ, ಮನುಷ್ಯರ ಉಸಿರು ನಿಂತು ಹೋಗುತ್ತದೆ. ಕಾರಣ ನಮ್ಮ ಪರಿಸರ ಉಳಿಯಬೇಕಾದರೆ ಹೆಚ್ಚೆಚ್ಚು ಮರಗಳನ್ನು ಬೆಳೆಯಬೇಕು’ ಎಂದು ಡಿವೈಎಸ್‍ಪಿ ಶಿವಾನಂದ ಪವಾಡಶೆಟ್ಟಿ ಸಲಹೆ ನೀಡಿದರು.
ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಪರಿಸರ ದಿನಾಚರಣೆ ನಿಮಿತ್ತ ಗಿಡಕ್ಕೆ ನೀರುಣಿಸಿ ನಂತರ ಅವರು ಮಾತನಾಡಿದರು. ‘ನಿರಂತರ ಪರಿಸರ ನಾಶದಿಂದ ಇಂದು ಸುನಾಮಿ, ಚಂಡಮಾರುತ, ಭೂಕಂಪಗಳಂಥ ಅವಘಡಗಳು ಸಂಭವಿಸುತ್ತಿವೆ. ಅಭಿವೃದ್ಧಿ ಹೆಸರಲ್ಲಿ ಗಿಡ ಮರಗಳನ್ನು ಕಡಿಯುತ್ತಿರುವುದೇ ಇದಕ್ಕೆ ಕಾರಣ. ಹೆಚ್ಚುತ್ತಿರುವ ಯಾಂತ್ರೀಕರಣವೂ ಪರಿಸರದ ಮೇಲೆ ಸವಾರಿ ಮಾಡುತ್ತಿದ್ದು ಗಿಡ ಮರಗಳನ್ನು ಬೆಳೆಸಿ ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಮನುಷ್ಯ ಸಂಕುಲ ವಿನಾಶಕ್ಕೆ ಸಾಕ್ಷಿ ಆಗಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಸಿಪಿಆಯ್ ವಿಕಾಸ ಲಮಾಣಿ, ಪಿಎಸ್‍ಆಯ್ ಶಿವಯೋಗಿ ಲೋಹಾರ ಹಾಗೂ ಸಿಬ್ಬಂದಿ ಇದ್ದರು.