ಹೆಚ್ಚು ಪುಸ್ತಕ ಓದಿ, ಅನಿವಾರ್ಯತೆ ಇದ್ದಾಗ ಮೊಬೈಲ್ ಬಳಸಿ.

 ಚಿತ್ರದುರ್ಗ. ನ.೧೭; ಅತಿಯಾಗಿ ಮೊಬೈಲ್‌ನ ಗೀಳು ಒಳ್ಳೆಯದಲ್ಲ, ಪುಸ್ತಕ ಓದಿ ನೀವು ಸಮಾಜದಲ್ಲಿ ತಲೆ ಎತ್ತಿ ಬದುಕಬಹುದು, ಮೊಬೈಲ್ ಬಳಸುವಾಗ ತಲೆ ತಗ್ಗಿಸಿ ನೋಡುತ್ತಾ ನಾವು ಸುತ್ತಮುತ್ತಲಿನ ಸಮಾಜವನ್ನ ಮರೆತು ಬದುಕುವಂತಾಗಿದೆ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಗೋಪಾಲಪ್ಪನವರು ತಿಳಿಸಿದರು.ಅವರು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡದ ಜ್ಞಾನ ವಿಜ್ಞಾನ ಸಮಿತಿ, ಕಲ್ಪವೃಕ್ಷ ಚಾರಿಟಬಲ್ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಸಂಯುಕ್ತವಾಗಿ ಆಯೋಜಿಸಿದ್ದ “ಪುಸ್ತಕ ಓದಿ ಅಭಿಯಾನ ಮತ್ತು ಮೊಬೈಲ್ ಗೀಳು ಬೇಡ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಮೊಬೈಲ್ ನೋಡುವ ಅವಸರದಲ್ಲಿ ನಾವು ನೈಜ ಪ್ರಪಂಚವನ್ನ ನೋಡುವುದನ್ನ ಮರೆಯಬಾರದು, ನಮ್ಮ ಸುತ್ತಮುತ್ತ ಆಗು ಹೋಗುಗಳನ್ನು ಅರಿವಿಗೆ ತೆಗೆದುಕೊಳ್ಳುವ ಅವಕಾಶಗಳು ಕಡಿಮೆಯಾಗಬಾರದು, ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಮಾಹಿತಿ, ಪೋಟೊಗಳನ್ನು ಹಂಚಿಕೊಳ್ಳುವಾಗ, ಎಚ್ಚರದಿಂದ ಇರಬೇಕು. ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.ಮೊಬೈಲು ಕ್ಷಣಿಕವಾಗಿ ನಮ್ಮನ್ನು ಸೆಳೆದರೂ ಸಹ ನಮ್ಮ ಏಕಾಗ್ರತೆಯನ್ನು ನಾಶಮಾಡುವ ಸಂದರ್ಭಗಳಿವೆ, ಅದರಲ್ಲಿನ ರಂಗು ರಂಗಿನ ಸ್ಕಿçÃನ್, ಗೇಮ್ಸ್, ಮ್ಯೂಸಿಕ್ ಹಾಗೂ ವಿಡಿಯೋಗಳು, ಹಾಡುಗಳು ಮತ್ತು ಸುಂದರವಾದ ಚಿತ್ರಗಳು, ತಮ್ಮ ವಯಸ್ಸಿಗೆ ಬೇಕಿಲ್ಲದ ವಿಷಯಗಳ ಬಗ್ಗೆ ಮನೆಯಲ್ಲಿನ ಅಂತರ್ಜಾಲಗಳಲ್ಲಿ ನಿಷೇಧವಿದ್ದರೂ ಮೊಬೈಲ್‌ಗಳಲ್ಲಿ ಲಭ್ಯವಿರುವುದರಿಂದ ವಿದ್ಯಾರ್ಥಗಳ ಅಧ್ಯಯನ ಕಾಲದಲ್ಲಿ ಮನಸ್ಸಿನ ದಾರಿ ತಪ್ಪಿಸುವ ಒಂದು ಮುಖ್ಯ ಅಸ್ತçವಾಗಿ ಈ ಮೊಬೈಲ್ ಪರಿವರ್ತನೆ ಆಗುತ್ತಿದೆ ಎಂದರು.ಉಪನ್ಯಾಸಕರಾದ ಡಾ. ಐನಳ್ಳಿ ರಮೇಶ್‌ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿರುವ ವೈವಿಧ್ಯಮಯ ಪುಸ್ತಕಗಳ ಪರಿಚಯ ಮಾಡಿಕೊಂಡು ಓದಬೇಕು, ಗ್ರಂಥಾಲಯಕ್ಕೆ ಭೇಟಿ ನೀಡದೆ, ವಿದ್ಯಾರ್ಥಿಗಳು ಆವರಣದಲ್ಲಿ ಸಮಯವನ್ನು ವ್ಯರ್ಥ ಮಾಡುವುದಕ್ಕಿಂತ, ಪುಸ್ತಕ ಓದಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಗ್ರಂಥಾಲಯಗಳನ್ನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ಮಾತನಾಡುತ್ತಾ ಅತಿಯಾದ ಮೊಬೈಲ್ ಬಳಕೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಸದಾ ಮೊಬೈಲ್ ಗೇಮ್, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವುದರಿಂದ ಮಾನಸಿಕ ಸ್ಥಿತಿ ಪ್ರಚೋದನಕಾರಿ ಆಗುತ್ತದೆ. ಇದರ ಪರಿಣಾಮ ಅವರ ನಡುವಳಿಕೆಗಳ ಮೇಲೆ ಆಗುತ್ತಿದೆ, ಇಂತಹ ಮಕ್ಕಳ ಮಾನಸಿಕ ಆರೋಗ್ಯ ಏರುಪೇರಾಗುತ್ತದೆ ಮತ್ತು ನಕಾರಾತ್ಮಕ ನಡುವಳಿಕೆಗೆ ಪ್ರಯತ್ನಿಸುತ್ತಾರೆ ಎಂದರು.ಜೀವಶಾಸ್ತç ವಿಜ್ಞಾನದ ವಿದ್ಯಾರ್ಥಿನಿ ಸಂಗೀತಾ ಮಾತನಾಡುತ್ತಾ ಮೊಬೈಲ್ ಇಲ್ಲದೆಯೂ ಸಹ ನಾವು ಬದುಕಬಹುದು, ವಿದ್ಯಾರ್ಥಿಗಳು ಬಳಕೆ ಮತ್ತು ದುರ್ಬಳಕೆ ಎರಡರ ಮಧ್ಯೆ ಇರುವ ವ್ಯತ್ಯಾಸವನ್ನು ಅರಿತಿರಬೇಕು ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ನಟರಾಜ ಎಲೆಕ್ಟಿçಕಲ್ ವಿಭಾಗ, ಡಾ ಗಟ್ಟಿ ಎನ್.ಬಿ. ಗಣಿತ ವಿಭಾಗ, ರೋಟರಿ ಕ್ಲಬ್‌ನ ಎ.ಜಿ. ವಿಶ್ವನಾಥ್, ಕಲ್ಪವೃಕ್ಷ ಚಾರಿಟಬಲ್ ಟ್ರಸ್ಟ್ನ ವೇಣುಗೋಪಾಲ ಹಾಜರಿದ್ದರು ಕಾರ್ಯಕ್ರಮದಲ್ಲಿ ಪುಸ್ತಕ ಓದಿ, ಮೊಬೈಲ್ ಗೀಳು ಬೇಡ, ಎಂಬ ಘೋಷಣೆಗಳನ್ನು ಕೂಗಲಾಯಿತು ಹಾಗೂ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.