ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಸಿಇಓ

ರಾಯಚೂರು,ಏ.೨೦- ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಪ್ ಅವರು ಎಸ್.ಎಸ್.ಎಲ್.ಸಿ ಘಟಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು.
ನಂತರ ಮಾತನಾಡಿ.ಈಗಾಗಲೇ ಜಿಲ್ಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ೫ ಘಟಕ ಪರೀಕ್ಷೆಗಳನ್ನು ರೂಪಿಸಿದ್ದು.ಸದ್ಯ ೩ ಘಟಕ ಪರೀಕ್ಷೆಗಳು ಮುಗಿದಿದ್ದು. ಈ ಘಟಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಜೊತೆಗೆ ಮಕ್ಕಳಿಗೆ ಉತ್ತಮವಾಗಿ ಅಭ್ಯಾಸಮಾಡಿ ಒಳ್ಳೆಯ ಫಲಿತಾಂಶ ಪಡೆಯಲು ಶ್ರಮಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಭಾರಿ ಉಪನಿರ್ದೇಶಕರಾದ ಸುಖದೇವ್, ವಿಷಯ ಪರಿವಿಕ್ಷಕ ಪ್ರವೀಣಾ, ಹೀರಾಬಾಯಿ, ಸಹಾಯಕ ಸಂಯೋಜಕರು ಸಮಗ್ರ ಶಿಕ್ಷಣ ಕೃಷ್ಣಾ, ತಿಮ್ಮನಗೌಡ, ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಉಪಸ್ಥಿತರಿದ್ದರು.
ಸಾಂಕೇತಿಕವಾಗಿ ರಾಯಚೂರು ತಾಲ್ಲೂಕಿನ ವಿಧ್ಯಾರ್ಥಿಗಳಿಗೆ ಮಾತ್ರ ಇಂದು ಬಹುಮಾನ ವಿತರಿಸಲಾಗಿದೆ.