ಹೆಚ್ಚುವರಿ ಸೂಪರ್ಡೆಂಟ್ ಪಿ.ನಾಗೇಶ್ ಅಭಿನಂದನೆ

ಬೆಂಗಳೂರು.ಮಾ೧೨: ಗ್ರಾಮಾಂತರ ಜಿಲ್ಲೆಯ ನೂತನ ಅಡಿಷನಲ್ ಸೂಪರ್ಡೆಂಟ್ ಆಫ್ ಪೋಲೀಸ್ ಹುದ್ದೆಗೆ ಹಿಂದೂ ಸಾದರ ಸಮುದಾಯದ ಹಿರಿಯ ಪೊಲೀಸ್ ಅಧಿಕಾರಿ ಪಿ.ನಾಗೇಶ್ ಕುಮಾರ್ ಗುರುವಾರ ಅಧಿಕಾರ ಸ್ವೀಕರಿಸಿದ್ದು, ಅವರನ್ನು ಸಮುದಾಯದ ಮುಖಂಡರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಕೇಂದ್ರ ಸಂಘದ ಅಧ್ಯಕ್ಷರಾದ ಡಿ.ಈ.ರವಿಕುಮಾರ್, ಸಮುದಾಯದ ಹಿರಿಯ ಪೊಲೀಸ್ ಅಧಿಕಾರಿಯಾದ ಪಿ.ನಾಗೇಶ್ ಕುಮಾರ್ ರವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಅಡಿಷನಲ್ ಸೂಪರ್ಡೆಂಟ್ ಆಫ್ ಪೋಲೀಸ್ ಹುದ್ದೆಗೆ ಅಲಂಕರಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ತಮ್ಮ ಅಧಿಕಾರವಧಿಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಸಮುದಾಯದ ಕೀರ್ತಿ ಮೆರೆಯಬೇಕಾಗಿದೆ ಎಂದು ಹೇಳಿದರು.
ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯರಾದ ನಾಗರಾಜ್, ತಮಿಳುನಾಡು ಹೊಸೂರಿನ ಕಾರ್ಪೊರೇಟರ್ ಹೆಚ್.ಶ್ರೀಧರ್, ದೊಡ್ಡಬಳ್ಳಾಪುರ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವಿ.ಆರ್.ರವಿಕುಮಾರ್, ಪೊಲೀಸ್ ಅಧಿಕಾರಿಗಳಾದ ಪ್ರವೀಣ್, ಮಂಜುನಾಥ್ ಸೇರಿದಂತೆ ಇತರರು ಅಭಿನಂಧಿಸಿದ್ದಾರೆ.