ಹೆಚ್ಚುವರಿ ರೈಲು ಸಂಚಾರಕ್ಕೆ ಅನುಮತಿ

ಬೆಂಗಳೂರು, ನ.೧೭: ರಾಜ್ಯದ ರೈಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲ್ವೆ ಇಲಾಖೆ ನಾಲ್ಕು ಹೆಚ್ಚುವರಿ ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದೆ.
ಯಶವಂತಪುರ ಮಾರ್ಗದಿಂದ ಬೀದರ್, ಯಶವಂತಪುರ- ಲಾತೂರ್-ಯಶವಂತಪುರ ನಡುವೆ ಹೆಚ್ಚುವರಿ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಯಶವಂತಪುರದಿಂದ ಬೀದರ್‌ಗೆ ಬರುವ ರೈಲು ಸಂಖ್ಯೆ ೦೬೨೭೧ ಇಂದಿನಿಂದ ವಾರದಲ್ಲಿ ನಾಲ್ಕು ದಿನ ಓಡಲಿದೆ. ಸೋಮವಾರ, ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಜೆ ೭ಗಂಟೆಗೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ ೯.೧೫ಕ್ಕೆ ಬೀದರ್ ಗೆ ಆಗಮಿಸಲಿದ್ದು.
೦೬೨೭೨, ಸೋಮವಾರ, ಮಂಗಳವಾರ, ಬುಧವಾರ ಮತ್ತು ಶುಕ್ರವಾರ ಸಂಜೆ ೬:೦೫ಕ್ಕೆ ಹೊರಡಲಿದ್ದು. ಮರುದಿನ ಬೆಳಿಗ್ಗೆ ೭.೪೦ಕ್ಕೆ ಯಶವಂತಪುರಕ್ಕೆ ತಲುಪಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.