ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಮಾರಿಹಾಳ ಶ್ರೀಖಾಸ್ಗತ ಮಠಕ್ಕೆ ಬೆಟ್ಟಿ

ತಾಳಿಕೋಟೆ:ಮಾ.23: ವಿಜಯಪೂರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಅವರು ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠಕ್ಕೆ ಬೆಟ್ಟಿ ನೀಡಿ ಶ್ರೀ ಖಾಸ್ಗತರ ಹಾಗೂ ಶ್ರೀ ವಿರಕ್ತಶ್ರೀಗಳ ಗದ್ದುಗೆಗೆ ಮಹಾಪೂಜೆ ಸಲ್ಲಿಸಿದರಲ್ಲದೇ ಶ್ರೀಮಠದ ಶ್ರೀ ಸಿದ್ದಲಿಂಗಶ್ರೀಗಳಿಂದ ಆಶಿರ್ವಾದ ಪಡೆದುಕೊಂಡರು.

ಶ್ರೀಮಠಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಅವರು ಬೆಟ್ಟಿ ನೀಡಿದ ಸಂದರ್ಬದಲ್ಲಿ ಶ್ರೀಮಠದ ಶ್ರೀ ಸಿದ್ದಲಿಂಗ ದೇವರು ಸನ್ಮಾನಿಸಿ ಗೌರವಿಸಿದರು.

ಈ ಸಮಯದಲ್ಲಿ ಶ್ರೀಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಪಿ.ಎಸ್.ಆಯ್.ಸುರೇಶ ಮಂಟೂರ, ಗಿರೀಶ ಚಲವಾದಿ, ವೀರಣ್ಣ ಅಜ್ಜಣ್ಣನವರ, ಯಲ್ಲಪ್ಪ ಹದಗಲ್ಲ ಹಾಗೂ ವಿಶ್ವನಾಥ ಪಾಟೀಲ, ರಾಮು ಗುತ್ತಿಹಾಳ, ಮೊದಲಾದವರು ಇದ್ದರು.