
ಭೋಪಾಲ್ ದುರಂತ
ನವದೆಹಲಿ, ಮಾ.೧೪ – ಬರೋಬ್ಬರಿ ೩೦೦೦ ಮಂದಿ ಸಾವಿಗೆ ಕಾರಣವಾಗಿದ್ದ ೧೯೮೪ ರ ಭೋಪಾಲ್ ಅನಿಲ ದುರಂತ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ ಕ್ಯುರೇಟಿವ್ ಅರ್ಜಿಯಲ್ಲಿ ಕೇಂದ್ರ ಸರ್ಕಾರ, ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್‌ನ ಉತ್ತರಾಧಿಕಾರಿ- ಯುಸಿಸಿ ಸಂಸ್ಥೆಗಳಿಂದ ಹೆಚ್ಚುವರಿ ೭,೮೪೪ ಕೋಟಿ ರೂ ಪರಿಹಾರವನ್ನು ಸಂತ್ರಸ್ಥರಿಗೆ ಕೊಡಿಸಬೇಕು , ಈ ಸಂಬಂಧಪಟ್ಟ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಸಲ್ಲಿಸಿತ್ತು.”ಎರಡು ದಶಕಗಳ ನಂತರ ಈ ಸಮಸ್ಯೆ ಮುಂದೆ ತರಲು ಯಾವುದೇ ತರ್ಕ ನೀಡದಕ್ಕಾಗಿ ಕೇಂದ್ರ ಸರ್ಕಾರದ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿ ಕ್ಯುರೇಟಿವ್ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ” ಎಂದು ಪೀಠ ತಿರಸ್ಕರಿಸಿದೆ.ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಇತ್ಯರ್ಥದ ಎರಡು ದಶಕಗಳಿಗೂ ಅಧಿಕ ಸಮಯದ ನಂತರ ಈ ಸಮಸ್ಯೆ ನ್ಯಾಯಪೀಠದ ಮುಂದೆ ಕೇಂದ್ರ ಸರ್ಕಾರ ತಂದಿರುವುದದರಲ್ಲಿ ಯಾವುದೇ ತರ್ಕವಿಲ್ಲ ಎಂದು ಹೇಳಿ ಕೇಂದ್ರ ಅರ್ಜಿ ವಜಾ ಮಾಡಿದೆ.ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಅಭಯ್ ಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆ ಕೆ ಮಹೇಶ್ವರ್ ಅವರನ್ನೊಳಗೊಂಡ ಪೀಠ ಜನವರಿ ೧೨ ರಂದು ಕೇಂದ್ರದ ಕ್ಯುರೇಟಿವ್ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತನ್ನ ತೀರ್ಪು ಪ್ರಕಟಿಸಿದೆ.ಸಂತ್ರಸ್ತರಿಗಾಗಿ ಆರ್‌ಬಿಐ ಬಳಿ ಇರುವ ೫೦ ಕೋಟಿ ರೂಪಾಯಿಯನ್ನು ಸಂತ್ರಸ್ತರ ಬಾಕಿ ಇರುವ ಕ್ಲೈಮ್‌ಗಳನ್ನು ಪೂರೈಸಲು ಕೇಂದ್ರ ಸರ್ಕಾರ ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.೧೯೮೪ ರ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಈಗ ಡೌ ಕೆಮಿಕಲ್ಸ್ ಒಡೆತನದ ಅಮೇರಿಕಾ ಮೂಲದ ಸಂಸ್ಥೆಯಾದ ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್‌ನಿಂದ ವರ್ಧಿತ ಪರಿಹಾರಕ್ಕಾಗಿ ಕೇಂದ್ರದ ಕ್ಯುರೇಟಿವ್ ಮನವಿಯನ್ನು ಸುಪ್ರೀಂ ಕೋರ್ಟ್ ಸರಾಸಗಟಾಗಿ ತಿರಸ್ಕರಿಸಿದೆ.
ಕೇಂದ್ರವು ೧೯೮೯ ರಲ್ಲಿ ಒಪ್ಪಂದದ ಭಾಗವಾಗಿ ಅಮೆರಿಕನ್ ಕಂಪನಿಯಿಂದ ೪೭೦ ದಶಲಕ್ಷ ಡಾಲತಗ (ರೂ. ೭೧೫ ಕೋಟಿ) ಗಿಂತ ಹೆಚ್ಚಿನ ಮೊತ್ತವನ್ನು ಯುಸಿಸಿ ಉತ್ತರಾಧಿಕಾರಿ ಸಂಸ್ಥೆಗಳಿಂದ ನೀಡಿತ್ತು.ಇನ್ನೂ ೭,೮೪೪ ಕೋಟಿ ರೂ ನೀಡಲು ಸಾದ್ಯವಿಲಗಲ ಎಂದು ಅರ್ಜಿ ವಜಾ ಮಾಡಿದೆ.
ಪ್ರತಿಕೂಲ ತೀರ್ಪು ನೀಡಿದ ನಂತರ ಮತ್ತು ಅದರ ಮರುಪರಿಶೀಲನೆಯ ಮನವಿಯನ್ನು ತಿರಸ್ಕರಿಸಿದ ನಂತರ ಕ್ಯುರೇಟಿವ್ ಅರ್ಜಿಯು ಫಿರ್ಯಾದಿಗೆ ಕೊನೆಯ ಉಪಾಯವಾಗಿದೆ. ಕೇಂದ್ರವು ಈಗ ವರ್ಧಿಸಲು ಬಯಸುತ್ತಿರುವ ಇತ್ಯರ್ಥವನ್ನು ರದ್ದುಗೊಳಿಸಲು ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಿಲ್ಲ.
ಡಿಸೆಂಬರ್ ೨ ಮತ್ತು ೩, ೧೯೮೪ ರ ಮಧ್ಯರಾತ್ರಿಯಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಕಾರಿ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಾದ ನಂತರ ೧೯೮೯ ರಲ್ಲಿ ೩,೦೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ೧.೦೨ ಲಕ್ಷ ಜನರನ್ನು ಬಾಧಿಸಿದ ನಂತರ ಈಗ ಡೌ ಕೆಮಿಕಲ್ಸ್ ಒಡೆತನದ ಯುಸಿಸಿ ೪೭೦ ದಶಲಕ್ಷ ಡಾಲರ್ ಪರಿಹಾರ ನೀಡಿತ್ತು
ಭೋಪಾಲ್ ಅನಿಲ ದುರಂತ ನಡೆದು ೪೦ ವರ್ಷ ಕಳೆದರೂ ಅದರ ಪರಿಣಾಮ ಮತ್ತು ಅನಿಲದಿಂದ ಪೀಳಿಗೆ ಮೇಲೆ ಆದ ಹಾನಿ ಇನ್ನೂ ನಿಂತಿಲ್ಲ.
- ಭೋಪಾಲ್ ಅನಿಲ ದುರಂತ ಪ್ರಕರಣ
- ಹೆಚ್ಚುವರಿ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿ ವಜಾ,
- ೭,೮೪೪ ಕೋಟಿ ಪರಿಹಾರಕ್ಕಾಗಿ ಅರ್ಜಿ
- ಸುಪ್ರೀಂಕೋರ್ಟ್ ನಿಂದ ತಿರಸ್ಕಾರ
- ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ
- ಯುಸಿಸಿ ಸಂಸ್ಥೆ ೭೧೫ ಕೋಟಿ ಪರಿಹಾರ ಪಾವತಿ
- ಅನಿಲ ದುರಂತದಲ್ಲಿ ೩,೦೦೦ ಮಂದಿ ಸಾವು
- ೧.೦೨ ಲಕ್ಷ ಕ್ಕೂ ಅಧಿಕ ಮಂದಿ ಬಾಧಿತ