
ಬೆಂಗಳೂರು, ಆ. ೧೮: ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಥೇಚ್ಚವಾಗಿ ನೀರು ಇತ್ತು. ಡ್ಯಾಮ್ ನಲ್ಲಿ ನೀರು ತುಂಬಿ ನಾವು ಹಿಡಿದುಟ್ಟುಕೊಳ್ಳಲು ಆಗದೇ ನೀರು ಬಿಟ್ಟಿದ್ದು. ಇಂತಹ ಪರಿಸ್ಥಿತಿಯನ್ನು ದೇವರು ನಮಗೆ ಕೊಟ್ಟಿದ್ದ. ಇವರ ಪಾಪದ ಕೆಲಸ ಲೂಟಿ ಹೊಡೆಯೋ ಕೆಲಸದಿಂದ ಪ್ರಕೃತಿ ಇವರಿಗೆ ಸಹಕಾರ ಕೊಡ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕಾವೇರಿ ನೀರು ತಮಿಳುನಾಡಿಗೆ ಬಿಟ್ಟ ವಿಚಾರ ಸಂಬಂಧ ಕುಮಾರಸ್ವಾಮಿ ಇದ್ದಾಗಲೂ ನೀರು ಬಿಟ್ಟಿದ್ದಾರೆ ಎಂಬ ಡಿಕೆಶಿ ಆರೋಪಕ್ಕೆ ಹೆಚ್‌ಡಿಕೆ ಪ್ರತಿಕ್ರಿಯಿಸಿದರು. ಹೌದು ನೀರು ಬಿಟ್ಟಿದ್ದೇವೆ. ದೇವೇಗೌಡರ ಕಾಲದಲ್ಲೂ ನೀರು ಬಿಟ್ಟಿದ್ದರು. ದೇವೇಗೌಡರು ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ ರಿಕ್ವೆಸ್ಟ್ ಮಾಡಿದಾಗ ನೀರು ಬಿಟ್ಟಿದ್ದರು. ದೇವೇಗೌಡರು ನೀರು ಬಿಡುವಾಗ ನಮ್ಮ ರೈತರ ಹಿತಾಸಕ್ತಿ ಮರೆತು ನೀರು ಬಿಟ್ಟಿಲ್ಲ. ಇದನ್ನ ಅರ್ಥ ಮಾಡಿಕೊಳ್ಳಬೇಕು. ಈ ರಾಜ್ಯದಲ್ಲಿ ಕಾವೇರಿ ಬಗ್ಗೆ ಹೋರಾಟದ ಮಾಡಿದ ಯಾವುದಾದ್ರು ರಾಜಕಾರಣಿ ಇದ್ದರೆ ಅದು ದೇವೇಗೌಡರು ಮಾತ್ರ. ನಾಡಿನ ರೈತರ ಹಿತರಕ್ಷಣೆಗೆ ಹೋರಾಟ ಮಾಡಿದ್ದು ದೇವೇಗೌಡರು. ಅವರ ಬಗ್ಗೆ ಚರ್ಚೆ ಮಾಡೋ ನೈತಿಕತೆ ಅವರಿಗೆ ಇಲ್ಲ ಎಂದು ಹೆಚ್‌ಡಿಕೆ ಕಿಡಿಕಾರಿದರು.
ದೇವೇಗೌಡರ ಸಲಹೆಯಿಂದ ೧೪ ಟಿಎಂಸಿ ನೀರು ನಮಗೆ ಸಿಕ್ಕಿದೆ. ನನ್ನ ಕಾಲದಲ್ಲಿ ಅವರು ಕೊಟ್ಟ ಸಲಹೆಯಿಂದ ನಮಗೆ ೧೪ ಖಿಒಅ ನೀರು ಹೆಚ್ಚಾಗಿ ಸಿಕ್ತು ಎಂದರು. ಇದೇ ವೇಳೆ ಮೇಕೆದಾಟು ಯೋಜನೆ ವಿಚಾರದ ಕುರಿತು ಪರತಿಕ್ರಿಯಿಸಿ, ಮೇಕೆದಾಟುದ್ದು ಏನ್ ಮಾಡ್ತಾರೆ. ಚಿಕನ್ ತಿಂದುಕೊಂಡು, ಚಿಕನ್ ಲೆಗ್ ತಿಂದುಕೊಂಡು ಪಾದಯಾತ್ರೆ ಮಾಡಿದ್ದು ಅಷ್ಟೇ ಗ್ಯಾರಂಟಿ. ಅಧಿಕಾರಕ್ಕೆ ಬಂದಿದ್ದಾರೆ ಈಗ ಏನ್ ಮಾಡ್ತಾರೆ? ಸ್ಟಾಲಿನ್ ನಿಮ್ಮ ಪಾಟ್ರ್ನರ್ ಅಲ್ಲವಾ ಅವರನ್ನ ಒಪ್ಪಿಸಿ ಈಗ. ಕೊಟ್ಟು ತೆಗೆದುಕೊಳ್ಳೋ ನೀತಿ ಮಾಡಿದ್ದೀರಾ ಒಪ್ಪಿಸಿ ಈಗ ಅವರನ್ನ. ನಾನು ಹೇಳಿದ ಮೇಲೆ ಸರ್ವ ಪಕ್ಷ ಸಭೆ ಕರೆಯುತ್ತೇನೆ ಅಂತ ಅವರು ಹೇಳ್ತಿದ್ದಾರೆ. ವಾಟರ್ ಮ್ಯಾನೇಜ್ಮೆಂಟ್ ಬೋರ್ಡ್ ಅವರು ನೀರು ಬಿಡು ಅಂತ ಹೇಳಿದ್ದಾರಾ ಎಂದು ಪ್ರಶ್ನಿಸಿದರು.
ಸುಪ್ರೀಂಕೋರ್ಟ್ ಕೂಡಾ ಡೈರೆಕ್ಷನ್ ಕೊಟ್ಟಿಲ್ಲ. ತಮಿಳುನಾಡಿನವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಹಾಕಿದ ಮೇಲೆ ನೀವೇನು ಮಾಡ್ತಿದ್ದೀರಾ. ೧೩೦ ಪೇಜ್ ಅರ್ಜಿ ತಮಿಳುನಾಡಿ ಹಾಕಿದೆ. ನಮ್ಮವರು ಯಾರೆ ಇದನ್ನೆ ಕೌಂಟರ್ ಆಗಿ ಅರ್ಜಿ ಹಾಕಿಲ್ಲ. ನೀವೇ ನೀರು ಬಿಡೋ ನಿರ್ಧಾರ ಮಾಡಿದ್ದು ಯಾಕೆ?, ನಾವು ತೋರಿಸೋ ಔದಾರ್ಯ ಅವರಲ್ಲಿ ಇದೆಯಾ?, ೪ ಲಕ್ಷ ಹೆಕ್ಟೇರ್ ಬೆಳೆ ಹೆಚ್ಚು ಮಾಡಿಕೊಂಡು ಅವರು ನೀರು ಕೇಳಿದ್ರೆ ಕೊಡೊಕೆ ಆಗುತ್ತಾ?, ನಮ್ಮ ರೈತರು ಇನ್ನು ಮೊದಲ ಬೆಳೆಗೆ ನಾಟಿ ಮಾಡಲು ಆಗಿಲ್ಲ. ಇದು ನಮ್ಮ ಪರಿಸ್ಥಿತಿ ಎಂದರು.