ನ್ಯೂಯಾರ್ಕ್, ಜೂ.೨೩- ಆರ್ಥಿಕ ವಿಚಾರದಲ್ಲಿ ಅಮೆರಿಕಾ ತೆಗೆದುಕೊಳ್ಳುವ ಹಲವು ನೀತಿಗಳು ಜಾಗತಿಕ ಮಟ್ಟದಲ್ಲಿ ಕೊಂಚವಾದರೂ ಪ್ರಭಾವ ಬೀರುವ ಸಂಗತಿ ತಿಳಿದಿರುವ ಸಂಗತಿ. ಇದೇ ಅವಧಿಯಲ್ಲಿ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಹೆಚ್ಚುವರಿ ನೀತಿ ದರಗಳ ಹೆಚ್ಚಳದ ಅಗತ್ಯವಿದೆ ಎಂದು ಯುಎಸ್ ಫೆಡರಲ್ ರಿಸರ್ವ್‌ನ ಗವರ್ನರ್ ಮಿಚೆಲ್ ಬೌಮನ್ ತಿಳಿಸಿರುವುದು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಆತಂಕ ಮೂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೌಮನ್, ಹಣದುಬ್ಬರವನ್ನು ತಗ್ಗಿಸುವಲ್ಲಿ ನಿಟ್ಟಿನಲ್ಲಿ ಅಮೆರಿಕಾದ ಸೆಂಟ್ರಲ್ ಬ್ಯಾಂಕ್ ಉತ್ತಮ ರೀತಿಯಲ್ಲಿ ಪ್ರಗತಿ ಸಾಧಿಸಿದೆ. ಆದರೆ ನಾವು ವಿತ್ತೀಯ ನೀತಿಯಲ್ಲಿ ಗಮನಾರ್ಹವಾಗಿ ಬಿಗಿಗೊಳಿಸುತ್ತಿದ್ದರೂ ಸ್ವೀಕಾರಾರ್ಹವಲ್ಲದ ರೀತಿಯಲ್ಲಿ ಉನ್ನತ ಮಟ್ಟದ ಹಣದುಬ್ಬರವನ್ನು ನೋಡುತ್ತಿದ್ದೇವೆ. ಕಾಲಾನಂತರದಲ್ಲಿ ಹಣದುಬ್ಬರವನ್ನು ನಮ್ಮ ಗುರಿಗೆ ತರಲು ಹೆಚ್ಚುವರಿ ನೀತಿ ದರಗಳ ಹೆಚ್ಚಳ ಅಗತ್ಯ ಎಂದು ನಾನು ನಂಬುತ್ತೇನೆ. ಕಳೆದ ವಾರ ಫೆಡ್‌ನ ಸಭೆಯಲ್ಲಿ ದರಗಳನ್ನು ಸ್ಥಿರವಾಗಿ ಹಿಡಿದಿಟ್ಟುಕೊಳ್ಳುವ ನಿರ್ಧಾರವನ್ನು ನಾನು ಬೆಂಬಲಿದ್ದೇನೆ. ಆರ್ಥಿಕ ವಲಯದಲ್ಲಿನ ಒತ್ತಡ ನಿರೀಕ್ಷಿತ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.