ಹೆಚ್ಚುವರಿ ಕೊಠಡಿ ಉದ್ಘಾಟನೆ

ಗಂಗಾವತಿ ನ.22: ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇರಕಲ್ಲಗಡ ಗ್ರಾಮದಲ್ಲಿ ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ ಹೆಚ್ಚುವರಿ ಕೊಠಡಿಗಳನ್ನು ಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ರಾಮಣ್ಣ ಚೌಡ್ಕಿ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಚನ್ನಪ್ಪ ಮಳಿಗಿ, ಸಿಡಿಸಿ ಉಪಾಧ್ಯಕ್ಷ ಬಸವರಾಜ ಪಿನ್ನಿ, ತಾಲೂಕು ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ತಾ.ಪಂ.ಸದಸ್ಯೆ ರೇಣುಕಮ್ಮ,ಮುಖಂಡರಾದ ವೀರಬಸಪ್ಪ ಶೆಟ್ಟರ್, ಪಟ್ಟಣಶೆಟ್ಟರ, ಯಮನೂರಪ್ಪ ಗೆದ್ದಿಗೇರಿ, ಹನಮೇಶ ಕುಷ್ಟಗಿ, ರಾಜೇಶ ಕಂದಕೂರು, ಶರಣಪ್ಪ ಇತರರಿದ್ದರು.