ಹೆಚ್ಚುತ್ತಿರುವ ಸರಗಳ್ಳತನ ಒಂಟಿ ಮಹಿಳೆಯರೇ ಗುರಿ

ವಿಜಯಪುರ.ಏ೧೦: ಪಟ್ಟಣದಲ್ಲಿ ಕಳೆದ ಒಂದು ತಿಂಗಳಿನಲ್ಲಿ ಎರಡು ಸರಗಳ್ಳತನಗಳು ಕಂಡುಬಂದಿದ್ದು ಅಮಾಯಕ ವಯಸ್ಸಾದ ಹೆಂಗಸರೆ ಸರಗಳ್ಳರ ಗುರಿಯಾಗಿದ್ದು ವಯಸ್ಸಾದ ಹೆಂಗಸರುಗಳನ್ನು ಮೋಡಿ ಮಾಡಿ ಬೆದರಿಸಿ ಸರಗಳ್ಳತನ ಮಾಡುವುದು ಕಂಡುಬಂದಿರುತ್ತದೆ.
ಕಳೆದ ಒಂದು ತಿಂಗಳ ಹಿಂದೆ ಸುಮಾರು ೭೦ ವರ್ಷದ ಪ್ರಮೀಳಮ್ಮ ಎಂಬಾಕೆಯನ್ನು ಸೋಮೇಶ್ವರ ಸ್ವಾಮಿ ದೇವಾಲಯದ ಬಳಿ ದೇವಸ್ಥಾನಕ್ಕೆ ಬರುವ ಭಕ್ತರಂತೆ ನಂಬಿಸಿ ಆಕೆಗೆ ತಿನ್ನಲು ಬಾಳೆಹಣ್ಣು ನೀಡಿ ಆಕೆಗೆ ಮತ್ತು ಬರುವಂತೆ ಮಾಡಿ, ಆಕೆಯನ್ನು ಮನೆಗೆ ಬಿಡುವುದಾಗಿ ತಿಳಿಸಿ ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿಕೊಂಡು ಊರೆಲ್ಲಾ ತಿರುಗಾಡಿಸಿ ಆಕೆಯಿಂದಲೇ ಕತ್ತಿನಲ್ಲಿರುವ ಸರ ತೆಗೆಸಿಕೊಂಡು ಆಕೆಯನ್ನು ಮುಖ್ಯರಸ್ತೆಯಲ್ಲಿ ಬಿಟ್ಟು ಹೋಗಿದ್ದ ಪ್ರಕರಣ ದಲ್ಲಿ ಆಕೆಗೆ ಏನು ಮಾಡಿದ್ದೇನೆಂಬ ಸ್ಥಿತಿ ಆಕೆಗೆ ತಿಳಿಯದಂತಾಗಿತ್ತು.
ಇದೀಗ ಬಸವೇಶ್ವರನಗರದಲ್ಲಿರುವ ಶಂಕರಮ್ಮ ಎಂಬ ಸುಮಾರು ೭೦ ವರ್ಷದ ಮಹಿಳೆ ರೇಷ್ಮೆ ಕೆಲಸಕ್ಕಾಗಿ ಸರ್ಕಾರಿ ಕಿರಿಯ ಕಾಲೇಜಿನ ಆಟದ ಮೈದಾನದ ಮೂಲಕ ಮಂಡಿಬೆಲೆ ರಸ್ತೆಗೆ ಹೋಗುವ ಸಂದರ್ಭದಲ್ಲಿ ಆಟದ ಮೈದಾನದ ಬಳಿಯೇ ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಕಳ್ಳರು ಆಕೆಯ ಕೈನಿಂದಲೇ ಸರವನ್ನು ಬಿಚ್ಚಿಸಿ ಮತ್ತೆ ವಾಪಸ್ಸು ನೀಡುವುದಾಗಿ ಬೆದರಿಸಿ ಸದಾ ಪಡೆದುಕೊಂಡು ಹೋಗಿರುವುದು ತಿಳಿದು ಬಂದಿರುತ್ತದೆ ಎರಡು ಪ್ರಕರಣಗಳು ವಿಜಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.
ಎಚ್ಚರಿಕೆ; ಏರುತ್ತಿರುವ ಬಿಸಿಲಿನಲ್ಲಿ ಹೆಂಗಸರು ಮಕ್ಕಳು ಹಾಗೂ ವಯಸ್ಸಾದವರು ತಲೆ ಸುತ್ತುವಂತಹ ಪರಿಸ್ಥಿತಿಯಲ್ಲಿ ಬಿಸಿಲಿನಲ್ಲಿ ಓಡಾಡುತ್ತಿದ್ದು ಒಂಟಿಯಾಗಿ ದೊರೆತಾಗ ಇಂತಹ ಅವಗಡಗಳು ನಡೆಯಲು ಸಾಧ್ಯವಾಗಿದ್ದು ಸಾಧ್ಯವಾದಷ್ಟು ಬಿಸಿಲಿನಲ್ಲಿ ಒಬ್ಬಂಟಿಗರಾಗಿ ಓಡಾಡದಿರುವುದು ಒಳ್ಳೆಯದೆಂದು ಕೆಲವರ ಅನಿಸಿಕೆ