ಹೆಚ್ಚುತ್ತಿರುವ ಕೊರಾನ್ ಅಲೆಯ ಆತಂಕ ಸೌಲಭ್ಯ ವಂಚಿತ ಆಸ್ಪತ್ರೆಯಿಂದ ಕೋವಿಡ್ ನಿಯಂತ್ರಿಸಲಾಗದು : ದರ್ಶನಾಪುರ

ಶಹಾಪುರ:ಎ.22:ದೇಶದಾದ್ಯಂತ ಶರವೇಗದಲ್ಲಿ ಹರಡುತ್ತಿರುವ ಕೊರಾನಾ ಎರಡನೆ ಅಲೆ ಜನ ಸಾಮಾನ್ಯರನ್ನು ಮತ್ತೆ ಬಿಚ್ಚಿ ಬಿಳಿಸಿದ್ದು. ಪ್ರತಿ ದಿನ ಭಯದ ಕರಿನರಳನಲ್ಲಿ ಜನರು ಜೀವ ಕಳೆಯುತ್ತಿದ್ದು ಸರ್ಕಾರ ಆಸ್ಪತ್ರೆಗಳಲ್ಲಿ ಎಲ್ಲ ಸೌಕರ್ಯಗಳನ್ನು ನೀಡುವದಾಗಿ ಕೇವಲ ಕಾಗದಗಳಲ್ಲಿ ಸೌಲಭ್ಯಗಳ ಲೆಕ್ಕಾಚಾರ ಮುಂದುವರೆದಿದ್ದು ಇಂದಿನವರೆಗೂ ನಗರ ಮತ್ತು ಪ್ರಾಥಮಿಕ ಆಸ್ಪತ್ರೆಗಳಲ್ಲಿ ಮೂಲಸೌಲಭ್ಯಗಳು ಕಾಣ ಸಿಗುತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯತೆಗಳಿಗೆ ಕಾರಣವಾಗಿದೆ ಎಂದು ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರ ಆರೋಪಿಸಿದರು.

ಭೀಮರಾಯನಗುಡಿಯ ವಿಶ್ರಾಂತಿ ಗೃಹದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರ ಪ್ರದೇಶಗಳಲ್ಲಿ ಹೆಚ್ಚು ಕೊರಾನ್ ಪ್ರಕರಣಗಳು ಸಕ್ರೀಯಗೊಳ್ಳುತ್ತಿದ್ದು, ಮುಂದೆ ಗ್ರಾಮೀಣ ಪ್ರದೇಶಗಳಲ್ಲಿ ಕೊವಿಡ್ ಒಕ್ಕರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಸರ್ಕಾರ ಪ್ರತಿ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಸೂಕ್ತ ಸೌಕರ್ಯಗಳ ನೀಡುವಲ್ಲಿ ಮುಂದಾಗಬೇಕು. ಎಂದ ಅವರು ಸರ್ಕಾರ ಮಾಡಿರುವ ಮಾರ್ಗಸೂಚಿಗಳನ್ನು ಅಧಿಕಾರಿಗಳು, ರಾಜಕೀಯ ದುರಿಣರು ಕಟ್ಟು ನಿಟ್ಟಾಗಿ ಪಾಲನೆ ಮಾಡಿದಲ್ಲಿ ಅಲ್ಪಪ್ರಮಾಣದಲ್ಲಿ ಕರಾನ್ ಭಯದಿಂದ ಶಮನಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜಿಲ್ಲಾಆಡಳಿತ ತಾಲೂಕು ಆಡಳಿತ ಈ ಕುರಿತು ಹೆಚ್ಚು ಕಾಳಜಿ ವಹಿಸಬೆಕು. ಕೊರಾನ್ ಮಾಹಾಮಾರಿ ರೋಗ ಮುಕ್ತರಾಗಲು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದ ದರ್ಶನಾಪುರ ತಿಳಿಸಿದರು.

ಶಹಾಪುರ ಮತಕ್ಷೇತ್ರದ ಜನರು ಕೊರಾನ್ ಭಯ ಬೇಡ. ಜಾಗ್ರತಿಯಿಂದ ಓಡಾಡಬೆಕು. ಮಾಸ್ಕ, ಸಾಮಾಜಿಕ ಅಂತರ. ಸೆನಟೈಜರ್ ಬಳಿಕೆ ಸದಾ ರೂಡಿಗತ ಮಾಡಿಕೊಳ್ಳಬೇಕು.ಎಂದು ದರ್ಶನಾಪುರವರು ಕ್ಷೇತ್ರದ ಜನರಿಗೆ ಮನವರಿಕೆ ಮಾಡಿದರು.

ವ್ಯಾಕ್ಷಿನ ಹಾಕಿಕೊಳ್ಳಿರಿ!!

ಕೊರಾನ್ ವೈರಸ್ ದೇಹದಲ್ಲಿ ಹೆಚ್ಚು ಪ್ರಭಾವ ಶಾಲಿಯಾಗದಂತೆ ತಡೆಗಟ್ಟು ಈ ವ್ಯಾಕಿನ ಮುಂಜಾಗ್ರತಾ ಕ್ರಮದ ಸೂಚಕವಾಗಿದೆ ಸರ್ವರು ವ್ಯಾಕ್ಷಿನ ಹಾಕಿಕೊಂಡಲ್ಲಿ ಜೀವನ ರೀಲಿಫ ಆಗುವದು ಖಚಿತವಾಗುತ್ತದೆ. ಕೊವಿಡ್ ಇಂಜಕ್ಷನ್ ಕಾಳ ಸಂತೆಯಲ್ಲಿ ದುಬಾರಿ ಬೇಲೆಗೆ ಮಾರಾಟ ಮಾಡುತ್ತಿದ್ದಾರೆ, ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುತ್ತಿಲ್ಲ. ಎಂದ ಬೇಸರ ವ್ಯಕ್ತಪಡಿಸಿದ ದರ್ಶನಾಪುರವರು ಕೊವಿಡ್ ವ್ಯಾಪಾರಿಕರಣವಾಗುತ್ತಿದೆ,ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೈಟ್ ಕಪ್ರ್ಯೂ ಅವೈಜ್ಞಾನಿಕ ನಿರ್ಧಾರ!!

ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದುಕೊಂಡು, ತಜ್ಞರ ವರದಿಯನ್ನು ಮುಂದಿಟ್ಟುಕೊಂಡು, ಹೆಚ್ಚುತ್ತಿರುವ ಕೊರಾನ್ ತಡೆಗಾಗಿ ಸೂಕ್ತ ನಿರ್ಣಾಯ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ನೈಟ್ ಕಪ್ರ್ಯೂ ಜಾರಿಯಿಂದ ಶೇ, 5 ಜನರಿಗೆ ಮಾತ್ರ ನಿರ್ಭಂದಿಸದಂತಾಗುತ್ತದೆ, ಇದನ್ನು ಒಂದು ವಾರಗಳ ಕಾಲ ಹಗಲು ಕಪ್ಯೂ ಜಾರಗೊಳಸಲಿ ಎಂದು ದರ್ಶನಾಪುರವರು ಸಲಹೆ ನೀಡಿದರು. ಮಾರ್ಗಸೂಚಿಗಳನ್ನು ಯಾವುದೆ ರಾಜಕೀಯ ಮತ್ತು ಹಿತಾಶಕ್ತಿಗಳ ಒತ್ತಡಗಳಿಗೆ ಮಣಿಯದೆ ಆಡಳಿತ ಅಧಿಕಾರಿಗಳು ಕಠಿಣ ಕ್ರಮಗಳೊಂದಿಗೆ ಜಾರಿಗೊಳಿಸುವಲ್ಲಿ ಶ್ರಮಿಸಬೆಕು ಎಂದು ಅವರು ತಿಳಿಸಿದರು.ಈ ಸಂಧರ್ಬದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಲ್ಲಪ್ಪ ಗೋಗಿ ಹಾಜರಿದ್ದರು.


ರಾಜಪಾಲರ ಮಧ್ಯ ಪ್ರವೇಶ ಸಲ್ಲದು

ಮುಖ್ಯಮಂತ್ರಿಗಳು ಕೊರಾನ್ ಪಾಜಟೀವ್ ಎಂದು ಆಸ್ಪತ್ರೆ ಸೇರಿದ್ದಾರೆ. ಅಲ್ಲದೆ ಅವರು ವಿಡಿಯೋ ಕಾನ್ಫೆರೆನ್ಸ್ ಮುಖಾಂತರ ಸಭೆ ಪಾಲ್ಗೊಂಡು ಕೊವಿಡ್ ನಿಯಂತ್ರಣಕ್ಕಾಗಿ ಸರ್ವ ಪಕ್ಷಗಳ ಸಭೆಗೆ ರಾಜಪಾಲರು ಮಧ್ಯ ಪ್ರವೇಶ ಮಾಡಿದ್ದು ಐತಿಹಾಸಿಕ ಸಂಗತಿಯಾಗಿದೆ, ಈ ಹಿಂದೆ ರಾಜಕೀಯ ದುಸ್ಥಿತಿಯಲ್ಲಿ ಮಾತ್ರ ರಾಜಪಾಲರ ಪ್ರವೇಶ ಪ್ರಮುಖ ಪಾತ್ರವಾಗಿತ್ತು,ಆದರೆ ರಾಜ್ಯ ಕೊವಿಡ್ ನಿಯಂತ್ರಕ್ಕಾಗಿ ಕರೆದ ಸಭೆಗೆ ರಾಜ್ಯಪಾಲರ ಆಗಮನ ಸಲ್ಲದು.. ಸರ್ಕಾರ ಕೊಮಾಸ್ಥಿತಿಯಲ್ಲಿರುವದು ಸಾಬೀತುಗೊಳ್ಳುತ್ತದೆ.
ಮರಿಗೌಡ ಹುಲಕಲ್,
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಯಾದಗಿರಿ