ಹೆಚ್ಚಿನ ಮತದಾನ ಮಾಡಿ, ತಾಲೂಕಿನ ಕೀರ್ತಿ ಹೆಚ್ಚಿಸಿ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಮೇ.೨: ತಾಲೂಕಿನಲ್ಲಿ ಹೆಚ್ಚಿನ ಮತದಾನವಾಗಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ವೈ.ಎಚ್.ಚಂದ್ರಶೇಖರ್ ಹೇಳಿದರು.ತಾಲೂಕಿನ ಕುಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಚೂರು ಗ್ರಾಮದಲ್ಲಿ ನರೇಗಾದಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕ ದಿನಾಚರಣೆ ನಿಮಿತ್ತ ತಾಲೂಕು ಪಂಚಾಯಿತಿ ಹಾಗೂ ಗ್ರಾ.ಪಂ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಚುನಾವಣಾ ಸ್ವೀಪ್ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ರಾಜ್ಯದಲ್ಲಿ ಈಗಾಗಲೇ ಮೊದಲನೇ ಹಂತದ ಚುನಾವಣೆಯೂ ನಡೆದಿದೆ. ಮತದಾನ ಪ್ರಮಾಣ ಕೂಡ ಎಲ್ಲರೂ ಗಮನಿಸಿದ್ದೀರಿ, ನಮ್ಮ ತಾಲೂಕಿನಲ್ಲಿ ಮೇ.7ರಂದು ಮತದಾನ ನಡೆಯಲಿದೆ, ಅಂದು ಶೇ.100ರಷ್ಟು ಮತದಾನ ಮಾಡಬೇಕು. ಅದರಲ್ಲೂ ವಿದ್ಯಾವಂತರೇ ಮುಂದೆ ಬಂದು ಮತದಾನ ಮಾಡಿ ಬೇರೆಯವರಿಗೂ ವೋಟ್ ಹಾಕಲು ತಿಳಿಸಬೇಕು. ಈ ಬಗ್ಗೆ ಯಾರೂ ನಿರ್ಲಕ್ಷö್ಯ ತೋರಬಾರದು ಎಂದು ತಿಳಿಸಿದರು. ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್ ಮಾತನಾಡಿ ನರೇಗಾ ಕೂಲಿಕಾರರು ಬೆಳಗ್ಗೆ 6 ಗಂಟೆಗೆ ಕೂಲಿ ಕೆಲಸಕ್ಕೆ ತೆರಳಿ ಹತ್ತು ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾದರೂ ವೋಟ್ ಮಾಡುವುದು ಮರೆಯಬಾರದು ಎಂದರು.ಪA.ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್ ಮಾತನಾಡಿದರು.ಇದೇ ವೇಳೆ ಕುಂಚೂರು ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ನಡೆದ ಚುನಾವಣಾ ಸ್ವೀಪ್ ಕಾರ್ಯಕ್ರಮದಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ತಾಲೂಕಿನ ನರೇಗಾದ ವಿವಿಧ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರು ಕಾರ್ಮಿಕ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಿದರು.ಈ ಸಂದರ್ಭದಲ್ಲಿ ಪಿಡಿಒ ಮಂಜ್ಯಾನಾಯ್ಕ, ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ತಾಂತ್ರಿಕ ಸಂಯೋಜಕ ನಾಗರಾಜನಾಯ್ಕ, ಕಾರ್ಯದರ್ಶಿ ಬಸವರಾಜ, ತಾಂತ್ರಿಕ ಸಹಾಯಕ ಅಭಿಯಂತರ ಆರ್.ಲೋಕೇಶ್ ನಾಯ್ಕ, ಬಿಎಫ್‌ಟಿ ಕೊಟ್ರೇಶ್ ಸೇರಿದಂತೆ ಕೂಲಿಕಾರರು ಇದ್ದರು.