ಹೆಚ್ಚಿನ ಮತಗಳಿಂದ ಗೆಲ್ಲಿಸಿದ್ದಕ್ಕೆ ಅಭಿನಂದನೆ ಶಶೀಲ್ ನಮೋಶಿ

ಹಗರಿಬೊಮ್ಮನಹಳ್ಳಿ.ನ.20 ಈ ಭಾಗದಲ್ಲಿ ಶೇಕಡವಾರು ಹೆಚ್ಚಿನ ಮಟ್ಟದಲ್ಲಿ ಮತ ನೀಡುವ ಮೂಲಕ ನನ್ನನ್ನು ಮತ್ತೊಮ್ಮೆ ಎಂಎಲ್ಸಿ ಆಯ್ಕೆ ಮಾಡಿದ್ದಕ್ಕೆ ಎಲ್ಲಾ ಶಿಕ್ಷಕ ವೃಂದಕ್ಕೆ ನಾನು ಅಬಾರಿ ಯಾಗಿರುತ್ತೇನೆ ಎಂದು ಎಂಎಲ್ಸಿ ಶಶೀಲ್ ನಮೋಶಿ ಹೇಳಿದರು.
ಅವರು ಪಟ್ಟಣದ ರೇಣುಕಾ ಪದವಿಪೂರ್ವ ಕಾಲೇಜ್ ಆವರಣದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬುಧವಾರ ಮಾತನಾಡಿ ಪದವೀಧರ ಶಿಕ್ಷಕರ ಕ್ಷೇತ್ರಕ್ಕೆ ನನ್ನನ್ನು ಸ್ಪರ್ಧಿಸಲು ಸಹಕರಿಸಿದ ನೇಮರಾಜ್ ನಾಯಕ್ ಅವರ ಪಾತ್ರ ಮಹತ್ವದಾಗಿದೆ. ಚುನಾವಣೆ ಎರಡು ವರ್ಷಗಳ ಮುಂಚೆ ನಾನು ಎಲ್ಲಾ ಕ್ಷೇತ್ರಗಳಿಗೆ ಸಂಪರ್ಕಿಸಿ ಮಾಡಿದ್ದಕ್ಕೆ ಗೆಲುವಾಗಿದೆ. ಕಳೆದ ಚುನಾವಣೆಯಲ್ಲಿ ನನ್ನನ್ನು ಮೂರು ಬಾರಿ ಆಯ್ಕೆ ಮಾಡಿ ಒಂದು ಬಾರಿ ನನ್ನನ್ನು ತಿರಸ್ಕಾರ ಮಾಡಿದ ಸಂದರ್ಭದಲ್ಲಿ ನಿರಂತರ ನಿಮ್ಮ ಸಂಪರ್ಕದಲ್ಲಿ ಇದ್ದೆ. ಈ ಬಾರಿ ಮತ್ತೆ ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದಕ್ಕೆ ನಾನು ಶಿಕ್ಷಕರ ಕುಂದುಕೊರತೆ ಸಂಬಳ ಸೇರಿದಂತೆ ಅನೇಕ ವಿಷಯಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಚರ್ಚಿಸುತ್ತೇನೆ. ರಾಜ್ಯದ ಮುಖ್ಯಮಂತ್ರಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ನಮಗೆಲ್ಲರಿಗೂ ಸಂತೋಷದ ವಿಷಯ ಅವರ ಒಂದು ಶ್ರಮದಿಂದ ನಾವು ಚುನಾವಣೆಯನ್ನು ಈ ಚುನಾವಣೆಯನ್ನು ಗೆಲ್ಲಬೇಕಾಯಿತು. ಕೊರೋನಾ ಎಂಬ ಎಂಬ ಮಾರಿ ಇಡೀ ಪ್ರಪಂಚವೇ ನಲಗಿರುವಾಗ ನಮ್ಮ ಮುಖ್ಯಮಂತ್ರಿಗಳು ಆರ್ಥಿಕ ಪರಿಸ್ಥಿತಿ ಏನೇ ಇರಲಿ ಎಂಪ್ಲಾಯಿ ಗಳಿಗೆ ಸಂಬಳ ಮಾತ್ರ ಯಾವುದೇ ಕಡಿತ ಮಾಡಿಲ್ಲ. ನೌಕರರ ವೇತನಕ್ಕೆ ಕಡಿವಾಣ ಇಲ್ಲದೆ ಮುಂದೆಯೂ ಕೂಡ ಸರ್ಕಾರದಿಂದ ಒಳ್ಳೆಯ ಸಹಕಾರ ಸಿಗುತ್ತದೆ ನಿಮಗೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ತಿಪ್ಪೇಸ್ವಾಮಿ, ರಾಮಲಿಂಗಪ್ಪ, ರಾಜು ಪಾಟೀಲ್, ಜಿಎಂ ಜಗದೀಶ್, ಬಿಜಿ ಬಡಿಗೇರ್ , ಸಿದ್ದರಾಜು ಹೋಟೆಲ್, ಬಿಎಂ ಉಮಾಪತಿ ಸ್ವಾಮಿ ಬ್ಯಾಟಿ ನಾಗರಾಜ್, ಶಿಕ್ಷಕರಾದ ಎಂಪಿಎಂ ಮಂಜುನಾಥ್ ,ಕೊಟ್ರೇಶ ಸೊನ್ನದ್, ಶಿವಕುಮಾರ್ ಗೌಡ ,ಬೆಟ್ಟಪ್ಪ ನಾಗರಾಜ್, ಇತರರು ಇದ್ದರು