ಹೆಚ್ಚಿನ ಬೆಲೆಗೆ ರೆಮ್ಡಿಸಿವಿರ್ ಮಾರಾಟ ವೈದ್ಯ ಸೇರಿ ಇಬ್ಬರು ಸೆರೆ


ಬೆಂಗಳೂರು,ಮೇ.೧೪-ಸರ್ಕಾರದಿಂದ ಹಂಚಿಕೆ ಯಾಗಿರುವ ರೆಮ್ಡಿಸಿವಿರ್ ಚುಚ್ಚುಮದ್ದುನ್ನು ರೋಗಿಗಳಿಗೆ ನೀಡದೆ ಉಳಿಸಿಕೊಂಡು ಅಕ್ರಮವಾಗಿ ಹೆಚ್ಚಿನ ಬೆಲೆ ಮಾರಾಟ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ವೈದ್ಯ ಸೇರಿ ಇಬ್ಬರು ಆರೋಪಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
ಮಾತೃ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಬಿಟಿಎಂ ಲೇಔಟ್ ನ ಡಾ.ಸಾಗರ್ (೩೮)ಹಾಗೂ ಮಾತೃ ಮತ್ತು ವೆಂಕಟೇಶ್ವರ ಆಸ್ಪತ್ರೆಯ ಹೌಸ್ ಕಿಪೀಂಗ್, ಮಾನ್ಯೇಜರ್ ಆಗಿದ್ದ ಕಾಮಾಕ್ಷಿಪಾಳ್ಯದಕೃಷ್ಣ(೩೧) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಕಳೆದ ೧೨ ರಂದು ರಾತ್ರಿ ೧೦ ರವೇಳೆ ಸಮಯದಲ್ಲಿ ಸಂಜಯನಗರದ ಆರ್.ಎಂ.ವಿ. ಆಸ್ಪತ್ರೆಯ ಬಳಿ ಆರೋಪಿಗಳು ರೆಮಿಡಿಸಿವೀರ್ ಔಷಧಿಯನ್ನು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಂಜ ಯನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ೨ ಬಾಟಲಿ ರೆಮಿಡಿಸಿವೀರ್ ಚುಚ್ಚುಮದ್ದು ೧-ಮೊಬೈಲ್ ೧-ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಹೆಚ್ಚಿನ ವಿಚಾ ರಣೆಗೊಳಪಡಿಸಿದಾಗ ಆರೋಪಿ ಸಾಗರ್ ಎಂಬುವನು ಮಾತೃ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದು, ಸದರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಗೆ ಡ್ರಗ್ ಕಂಟ್ರೋಲರ್ ಗಳಿಂದ ೧೦ ರೆಮ್ಡಿಸಿವಿರ್ ಚುಚ್ಚುಮದ್ದು
ಹಂಚಿಕೆಯಾಗಿದ್ದು, ಅದರಲ್ಲಿ ೮ನ್ನು ಬಳಸಿದ ಆರೋಪಿ ಸಾಗರ್ ಎರಡನ್ನೂ ಉಳಿಸಿಕೊಂಡು, ಮತ್ತೊಬ್ಬ ಆರೋಪಿ ಅದೇ ಆಸ್ಪತ್ರೆಯ ಹೌಸ್ ಕೀಪಿಂಗ್ ಮ್ಯಾನೇಜರ್ ಆಗಿದ್ದ ಕೃಷ್ಣ ಎಂಬುವನ ಜೊತೆ ಸೇರಿ ಔಷಧಿಯನ್ನು ಹೊರಗೆ ತೆಗೆದುಕೊಂಡು ಬಂದು ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡಲು ಬಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.
ಆರೋಪಿಗಳು ರೆಮಿಡಿಸಿವೀರ್ ಔಷಧಿಯನ್ನು ಸರ್ಕಾರ ನಿಗಧಿ ಮಾಡಿರುವ ಬೆಲೆಗಿಂತ (ರೂ. ೩,೫೦೦/-) ಒಂದಕ್ಕೆ ೩೦ ರಿಂದ ೪೦ ಸಾವಿರಕ್ಕೆ ಮಾರಾಟ ಮಾಡಲು ಬಂದಿದ್ದಾಗ ಸಿಕ್ಕಿಬಿದ್ದಿದ್ದಾರೆ.ಆರೋಪಿ ಸಾಗರ್ ಹಿಂದೆ ರೋಗಿಗೆ ಹಂಚಿಕೆಯಾಗಿದ್ದ ರೆಮ್ಡಿಸಿವಿರ್ ಚುಚ್ಚುಮದ್ದು ನ್ನು ಸರಿಯಾಗಿ ನೀಡದೇ ೪ನ್ನು ಉಳಿಸಿಕೊಂಡು ಕೃಷ್ಣ ನಿಗೆ ನೀಡಿ ಹೆಚ್ಚಿನ ಹಣಗಳಿಸಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ ಎಂದು ಧರ್ಮೇಂದ್ರ ತಿಳಿಸಿದರು.