ಹೆಚ್ಚಾಗಿ ನಡೆಯುತ್ತಿರುವ ವಯೋನಿವೃತ್ತಿ ಸಮಾರಂಭ ಸ್ವಾಗತ ಸಮಾರಂಭ ನಡೆಯುತ್ತಿಲ್ಲ: ಪ್ರೋ.ದಯಾನಂದ ಅಗಸರ್

ಕಲಬುರಗಿ.ಆ.02:ಪ್ರತಿ ತಿಂಗಳು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿಗಳು ವಯೋನಿವೃತ್ತಿ ಹೊಂದಿ ಬೀಳ್ಕೂಡುಗೆ ಸಮಾರಂಭಗಳು ಆಗುತ್ತಿವೆ ಆದರೆ ಸ್ವಾಗತ ಮಾಡುವವರ ಕಾರ್ಯಕ್ರಮಗಳು ಮಾತ್ರ ಆಗುತಿಲ್ಲ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೋ. ದಯಾನಂದ ಅಗಸರ ಅವರು ವಿμÁಧ ವ್ಯಕ್ತಪಡಿಸಿದರು.
ಶನಿವಾರದಂದು ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ವಯೋ ನಿವೃತ್ತಿ ಹೊಂದಿರುವ ಶಿಕ್ಷಕರ ಹಾಗೂ ಆಡಳಿತ ವರ್ಗದವರಿಗೆ ವಯೋ ನಿವೃತ್ತಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಾಣಿಜ್ಯ ಶಾಸ್ತ್ರದ ವಿಭಾಗ ಪ್ರಾಧ್ಯಾಪಕರಾದ ಪ್ರೋ.ಸಿ.ಬಸವರಾಜ, ಹಣಕಾಸು ವಿಭಾಗದ ಅಧೀಕ್ಷರಾದ ಡಿ.ಕೆ.ಸಾಮುವೇಲ, ವಿಶ್ವವಿದ್ಯಾಲಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶೋಭಾ ಕಂದಗೊಳ
ಜೂನ್ ತಿಂಗಳಲ್ಲಿ 7 ಸಿಬ್ಬಂದಿಗಳು, ಜುಲೈ ತಿಂಗಳು 4 ಸಿಬ್ಬಂದಿಗಳು ವಯೋನಿವೃತ್ತಿ ಹೊಂದಿದ್ದಾರೆ. ಇದರಿಂದ ಉಪನ್ಯಾಸಕರಿಗೆ ಹಾಗೂ ಆಡಳಿತ ವಿಭಾಗಕ್ಕೆ ಹೆಚ್ಚಿನ ಕೆಲಸದ ಒತ್ತಡ ಬಿಳುತ್ತದೆ ಎಂದರು.
ವಾಣಿಜ್ಯ ವಿಭಾಗದ ಪೆÇ್ರ. ಸಿ. ಬಸವರಾಜ ಮಾತನಾಡಿ, ಒಳ್ಳೆಯ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಿ ಅನೇಕ ವಿಭಾಗಗಳಲ್ಲಿ ತಮಗೆ ನೀಡಿದ ಕೆಲಸ ಕಾರ್ಯಗಳನ್ನು ಸುಗಮವಾಗಿ ಮಾಡಿದ್ದಾರೆ ಇಂತಹ ಒಳ್ಳೆಯ ಪ್ರಾಧ್ಯಾಪಕರನ್ನು ದೇವರು ಸದಾ ಆರೋಗ್ಯ ಭಾಗ್ಯ ನೀಡಲಿ ಎಂದು ಶುಭ ಹಾರೈಸಿದರು.
ಅದೇ ರೀತಿಯಾಗಿ ಹಣಕಾಸು ಇಲಾಖೆಯ ಅಧೀಕ್ಷರಾದ ಡಿ.ಕೆ. ಸಾಮುವೇಲ ಅವರು 41 ವರ್ಷ ಸುದಿರ್ಘವಾಗಿ ಸೇವೆ ಸಲ್ಲಿಸಿದ್ದಾರೆ. ಅವರು ವಿವಿಧ ಇಲಾಖೆಯಲ್ಲಿ ಕೆಲಸ.ಮಾಡಿ.ಒಳ್ಳೆಯ. ಹೆಸರು. ಮಾಡಿದ್ದಾರೆ. ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಶೋಭಾ ಕಂದಗೊಳ ಅವರು ಸಹ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿ ಶಾಲೆಗೆ ಕೀರ್ತಿ ತಂದಿದ್ದಾರೆ. ಕೆಲವರು ವಿದ್ಯಾರ್ಥಿಗಳು ಹೊರದೇಶಗಳದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಅವರಿಗೆ ಹಾಗೂ ಗೋಪಾಲ ದೇಶಪಾಂಡೆಗೆ ತಮ್ಮ ವಯೋ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ವಾಣಿಜ್ಯ ವಿಭಾಗದ ಪೆÇ್ರ. ಸಿ. ಬಸವರಾಜ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 40 ವರ್ಷ ಸುದಿರ್ಘ ಸೇವೆ ಸಲ್ಲಿಸಿ, ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿದ ತೃಪ್ತಿ ಇದೆ ವಿಶ್ವವಿದ್ಯಾಲಯದಲ್ಲಿ ನಮಗೆ ನೀಡಿರುವ ಯಾವುದೇ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದೇನೆ ಎಂದು ಹೇಳಿದರು.
ಹಣಕಾಸು ವಿಭಾಗದ ಅಧೀಕ್ಷರಾದ ಡಿ.ಕೆ. ಸಾಮುವೇಲ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ದೇವರು ಕೆಲಸ ಕೊಟ್ಟಿದಕ್ಕಾಗಿ ಕೃತಜ್ಞತೆ ಸಲ್ಲಿಸಿ ನಾನು 19 ವರ್ಷದಲ್ಲಿ ಸೇವೆಗೆ ಸೇರಿದ್ದೇನೆ. 41 ವರ್ಷ ಮೂರು ತಿಂಗಳು ಸುದೀರ್ಘವಾಗಿ ಸೇವೆ ಮಾಡಿದ್ದೇನೆ.
ವಿಶ್ವವಿದ್ಯಾಲಯದಲ್ಲಿ ಅನೇಕ ಕುಲಪತಿಗಳ ಜೊತೆಗೆ ಕೆಲಸ ಮಾಡಿ ನನಗೆ ತೃಪ್ತಿ ತಂದಿದೆ. ಎಲ್ಲಾ ಕೆಲಸ ಕಾರ್ಯಕಗಳನ್ನು ಅಚ್ಚುಕಟ್ಟಾಗಿ ಅನೇಕ ವಿಭಾಗದಲ್ಲಿ ನಿರ್ವಹಿಸಿದ್ದೇನೆ. ವಿಶ್ವವಿದ್ಯಾಲಯ ನೀಡಿದ ಹುದ್ದೆಗೆ ವಿಶ್ವವಿದ್ಯಾಲಯಕ್ಕೆ ಸದಾ ಕೃತಜ್ಞನಾಗಿರುತ್ತೇನೆ ಎಂದರು.
ವಾಣಿಜ್ಯ ವಿಭಾಗದ ಪೆÇ್ರೀ. ಬಿ.ವಿಜಯ ಅವರು ಮಾತನಾಡಿ, ನಾನು ಹಣಕಾಸು ವಿಭಾಗದಲ್ಲಿ ಇದ್ದಾಗ ಡಿ.ಕೆ. ಸಾಮುವೇಲ ಅವರು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಅವರ ವಯೋ ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಶುಭ ಹಾರೈಸಿದರು.
ವೇದಿಕೆ ಮೇಲೆ ವಿಶ್ವವಿದ್ಯಾಲಯದ ಕುಲಸಚಿವರಾದ ವಿ.ಟಿ.ಕಾಂಬಳೆ, ವಿತ್ತಧಿಕಾರಿ ಎನ್.ವಿ. ನಡುವಿನಮನಿ, ಶಿಕ್ಷಕಿ ಶೋಭಾ ಕಂದಗೊಳ, ಶಿಕ್ಷಕೇತರ ಸಂಘದ ಅಧ್ಯಕ್ಷರಾದ ಪ್ರಕಾಶ ಹದನೂರ, ವಿವಿಧ ಇಲಾಖೆಯ ಡೀನ್ ಹಾಗೂ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರವನ್ನು ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಅಧೀಕ್ಷ ಡಿ.ರುದ್ರವಾಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದ್ದರು.