ಹೆಚ್‍ಐವಿ ಸೋಂಕಿತರಿಗೆ ಸಾಮಾಜಿಕ ಕಳಂಕ ಸಲ್ಲದು

(ಸಂಜೆವಾಣಿ ವಾರ್ತೆ)
ವಿಜಯಪುರ : ಆ.28:ಹೆಚ್.ಐ.ವಿ ಸೋಂಕು ಸಾಂಕ್ರಾಮಿಕ ರೋಗವಲ್ಲ ಇನ್ನು ನೂರಕ್ಕೆ ನೂರರಷ್ಟು ತಡೆಗಟ್ಟಬಹುದಾಗಿದೆ. ಸೋಂಕಿತರು ಇತರರಂತೆ ಸಂತೋಷದಿಂದ ಜೀವನ ಸಾಗಿಸಬಹುದಾಗಿದೆ ಎಂದು ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಸಂಪತಕುಮಾರ ಗುಣಾರಿ ಹೇಳಿದರು.
ಅವರು ನಗರದ ಸಂತ ಅನ್ನಮ್ಮನವರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೇಸೇನ್ಸ್ ಸೋಸಾಯಿಟಿ ಬೆಂಗಳೂರು ಜಿಲ್ಲಾ ಏಡ್ಸ್ ನಿರೋಧಕ ಹಾಗೂ ನಿಯಂತ್ರಣ ಘಟಕ ವಿಜಯಪುರ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಸೇವಾ ಸಂಸ್ಥೆ ವಿಜಯಪುರ ಇವರ ಸಹಯೋಗದಲ್ಲಿ ಹೆಚ್‍ಐವಿ ಸೋಂಕಿತರ ರಾಜ್ಯ ಮಟ್ಟದ ವಧುವರರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಮಲ್ಲನಗೌಡ ಬಿರಾದಾರ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಇವರು ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮ ಮುಖಾಂತರ ಯುವ ಯುವತಿಯರಿಗೆ ಎಲ್ಲ ಸಮುದಾಯ ಜನರಿಗೆ ನಿರಂತರವಾಗಿ ಹೆಚ್‍ಐವಿ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಂಡು ಹೆಚ್‍ಐವಿ ಹೊಸ ಸೋಂಕನ್ನು ಸೊನ್ನೆಗೆ ತರುವ ಕಾರ್ಯಕ ಮಾಡಲಾಗುತ್ತಿದೆ. ಹೆಚ್‍ಐವಿ ಮೊದಲಿರುವಷ್ಟು ಕಳಂಕ ತಾರತಮ್ಯ ಈಗಿಲ್ಲ ಹೆಚ್‍ಐವಿ ಸೋಂಕಿತರು ದಾಂಪತ್ಯ ಜೀವನ ನಡೆಸಿ ಹೆಚ್‍ಐವಿ ಸೋಂಕಿಲ್ಲದ ಮಕ್ಕಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಆಸ್ಪ್ರತ್ರೆಯ ಹಿರಿಯ ಆಪ್ತಸಮಾಲೋಚಕ ರವಿ ಕಿತ್ತೂರ ಮಾತನಾಡಿ, ಈಗಾಗಲೇ ವೈಯಕ್ತಿಕವಾಗಿ ಐವತ್ತುಕ್ಕಿಂತ ಹೆಚ್ಚಿನ ಜೋಡಿಗಳಿಗೆ ಮದುವೆ ಮಾಡಿಸಲಾಗಿದೆ. ಅವರಿಗೆ ಹುಟ್ಟಿದ ಮಕ್ಕಳು ಅಷ್ಟು ಜನ ಹೆಚ್‍ಐವಿ ನೆಗಟಿವ್ ಮಕ್ಕಳಿದ್ದಾರೆ. ಇದರಿಂದ ಹೆಚ್‍ಐವಿ ಸೋಂಕಿತರ ಬದುಕು ಸಕರಾತ್ಮಕದಿಂದ ಜಿವನ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಿರಂತರವಾಗಿ ಸೋಂಕಿತರಿಗೆ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಮುಖ್ಯ ಅಥಿತಿಗಳಾಗಿ ಮಾತನಾಡಿದ ಪೂಜಾ ಟೆಲಿವ್ಹಿಜನ್ ಮಾಲೀಕರಾದ ವಿಜಯಕುಮಾರ ಚವ್ಹಾಣ, ಪಾದ ಪ್ರಾಸ್ಟಿಸ್ ಜಿಲ್ಲಾ ಮೇಲ್ವೀಚಾರಕರಾದ ಬಾಬುರಾವ ತಳವಾರ, ಪ್ರಗತಿಪರ ಚಿಂತಕರಾದ ಅಭೀಷೇಕ ಚಕ್ರವರ್ತಿ ಸಂಕಲ್ಪ ಅಧ್ಯಕ್ಷ ಗಂಗಯ್ಯ ಹಿರೇಮಠ, ಕಾರ್ಯಕ್ರಮದ ರೂವಾರಿ ಹಾಗೂ ವೃದ್ಧಾಶ್ರಮ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಕಾಂಬಳೆ ಮಾತನಾಡಿದರು.
ರಾಜ್ಯ ಮಟ್ಟದ ವಧುವರರ ಸಮ್ಮೇಳನ ಹಮ್ಮಿಕೊಂಡಿದ್ದರಿಂದ ನೂರಾರು ಹೆಚ್‍ಐವಿ ಸೋಂಕಿತರರು ಸುಂದರ ದಾಂಪತ್ಯ ಜೀವನಕ್ಕೆ ಕಾಲಿಡಲು ಕಾರಣವಾಗಿದೆ. ಇದರಿಂದ ಇತರರಿಗೆ ಹೆಚ್‍ಐವಿ ಹರಡುವುದನ್ನು ತಪ್ಪಿಸದಂತಾಗಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಹಮ್ಮಿಕೊಂಡು ಸಾಮಾಜಿಕವಾಗಿ ಮಾನಸಿಕವಾಗಿ ಸೋಂಕಿತರಿಗೆ ಬೆಂಬಲ ನೀಡುವ ಕಾರ್ಯ ಮುಂದುವರಿಯುವಂತಾಗಲಿ ಎಂದು ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ಶರಣು ಕಂಟಿ, ಸ್ವಾಗತವನ್ನು ವಿಜಯಕುಮಾರ ಕಾಂಬಳೆ, ಸಂಸ್ಥೆಯ ಸಿಬ್ಬಂಧಿಗಳಾದ ರಾಗು ಹಿರೇಮನಿ, ಶ್ರೀಶೈಲ ಕೋಳಿ, ಹಣಮಂತ ಕತ್ನಳ್ಳಿ, ರೇವಣಸಿದ್ಧ ಹಲಶೇಟ್ಟಿ, ಮಲ್ಲು ಪೂಜಾರಿ, ಅನಿತಾ ಕುಂಬಾರ, ರೇಣುಕಾ ಇಲಕಲ್, ಜಯಶ್ರೀ ಬಿರಾದಾರ, ರೇಣುಕಾ ಉಪ್ಪಾರ, ವಿಜಯಲಕ್ಷ್ಮೀ ಹೂಗಾರ, ವಿಜಯಲಕ್ಷ್ಮೀ ಸೋಲಾಪುರ, ನೀಲಕ್ಕ ಶಿವಶರಣ, ಸುರೇಶ ಸುಧಾಮ್, ಸಂಜು ಬಿರಾದಾರ, ಯಲ್ಲಾಲಿಂಗ ಮಸಳಿ, ಸಂತೋಷ ಕಾಂಬಳೆ, ಉಪೇಂದ್ರ ದೊಡಮನಿ, ರೇಣುಕಾ ಜುಮನಾಳ, ಕರುಣಾ ಮಣ್ಣೂರ, ಸವಿತಾ ಇಟಕರ, ರೇಖಾ ಸೈದರ ಮುಂತಾದವರು ಇದ್ದರು.
ಈ ಕಾರ್ಯಕ್ರಮದಲ್ಲಿ 200 ಕ್ಕಿಂತ ಹೆಚ್ಚು ಹೆಚ್‍ಐವಿ ಸೋಂಕಿತ ವಧು ವರರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡರು.