ಹೆಚ್‌ಐವಿ ಸೋಂಕಿತರಿಗೆ ಸರ್ಕಾರದಿಂದ ಸಿಗದ ಪೌಷ್ಠಿಕ ಆಹಾರ

ರಾಯಚೂರು,ಮಾ.೨೩- ಜಿಲ್ಲೆಯಲ್ಲಿನ ಹೆಚ್‌ಐವಿ ಸೋಕಿತರಿಗೆ ಸರ್ಕಾರದಿಂದ ಪೌಷ್ಟಿಕಾಂಶಯುಕ್ತ ಆಹಾರ ಸರಿಯಾಗಿ ನೀಡುತ್ತಿಲ್ಲ. ಎಚ್‌ಐವಿ ಕುರಿತ ೨೦೧೭ಮಸೂದೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಂಗಮ ಸಂಸ್ಥೆಯ ಕಾರ್ಯಕ್ರಮ ನಿರ್ವಾಹಕ ಮಹೆರಶ ಪಾಟೀಲ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು ೬ ಸಾವಿರ ಹೆಚ್‌ಐವಿ ಸೋಂಕಿತರು ಇದ್ದಾರೆ. ೩೪೦೦ ಮಹಿಳಾ ಸೋಂಕಿತರು, ೧೭೦೦ಪುರುಷ ಸೋಂಕಿತರು ಹಾಗೂ ೯೦೦ ತೃತೀಯ ಲಿಂಗಿಗಳು ಸೋಂಕಿಗೆ ಗುರಿಯಾಗಿದ್ದಾರೆ.ಇವರಿಗೆ ಸಂಗಮ ಸಂಸ್ಥೆಯಿಂದ ಔಷಧಿಗಳು ಹಾಗೂ ಪೌಷ್ಟಿಕಾಂಶ ಯುಕ್ತ ಆಹಾರ ನೀಡಲಾಗುತ್ತಿದೆ. ಸರ್ಕಾರೇತರ ಸಂಸ್ಥೆಯಾದ ಸಂಗಮ ಸಂಸ್ಥೆಗೆ ಸರ್ಕಾರ ಹೆಚ್ಚಿನ ಧನಸಹಾಯ ನೀಡದಿದ್ದಲ್ಲಿ ಸೋಂಕಿಯತಿಗೆ ಮತ್ತಷ್ಟು ಸಹಾಯವಾಗಲಿದೆ. ಸೋಂಕಿತರಿಗೂ ಪೌಷ್ಟಿಕಾಂಶ ಅಹಾರ, ಆರೈಕೆ, ಸುರಕ್ಷತೆಯ ಬಗ್ಗೆ ೨೦೧೭ ರ ಮಸೂದೆಯಲ್ಲಿ ಅನೇಕ ಅಂಶಗಳಿದ್ದು ಈ ಮಸೂದೆಯನ್ನು ಜಾರಿಯಾಗುತ್ತಿಲ್ಲ. ಇದು ಮಾನವಹಕ್ಕುಗಳ ಉಲ್ಲಂಘನೆ ಯಾಗಿದೆ. ವಿವಿಧ ಕಾಯಿಲೆಗಳಿಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಹೆಚ್‌ಐವಿ ಸೋಂಕಿತರಿಗೆ ಅನೇಕ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಲಾಗುತ್ತಿದೆ. ಈ ಮಸೂದೆಯ ಬಗ್ಗೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ.
೨೫ ವರ್ಷಗಳಿಂದ ಸಂಗಮ ಸಂಸ್ಥೆ ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಹೆಚ್‌ಐವಿಯ ಸೋಂಕಿತರ ಪರ ಕೆಲಸ ಮಾಡುತ್ತಿದ್ದು ಸರ್ಕಾರ ಸಂಸ್ಥೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಸ್ಥೆಯ ಮುಖಂಡ ತಾನಾಜಿ ಸಾವಂ ಇದ್ದರು.