ಹೆಚ್‍ಐವಿ, ಏಡ್ಸ್ ಜನಜಾಗೃತಿ ಆಂದೋಲನ

ಕಲಬುರಗಿ,ಫೆ.26-ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕದ ಸಂಯುಕ್ತಾಶ್ರಯದಲ್ಲಿ ಆಳಂದನ ಶ್ರೀ ಸಾಯಿ ಜನಜಾಗೃತಿ ಕಲಾ ಸಂಘದ ವತಿಯಿಂದ ಬೀದಿ ನಾಟಕ ಕಲಾ ತಂಡದ ಮೂಲಕ ಹೆಚ್‍ಐವಿ/ಏಡ್ಸ್ ಜನಜಾಗೃತಿ ಆಂದೋಲನ ನಡೆಸಲಾಯಿತು.
ನಗರದ ಎಪಿಎಂಸಿ ಗಂಜ್ ಏರಿಯಾದಲ್ಲಿ ಹಮ್ಮಿಕೊಂಡಿದ್ದ ಬೀದಿ ನಾಟಕ ಕಾರ್ಯಕ್ರಮದಲ್ಲಿ ಕೃಷಿ ಆಡಳಿತ ಅಧಿಕಾರಿಗಳು ಮಾತನಾಡಿ, ಹೆಚ್‍ಐವಿ/ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ತಂಡದ ಮುಖ್ಯಸ್ಥರಾದ ಗಂಗೂಬಾಯಿ ಎಂ.ಕೌಲಗಿ, ಮಲ್ಲಿಕಾರ್ಜುನ ಖಾನಾಪೂರ, ಮಹಾಂತೇಶ ಆಳಂದ, ಚಂದ್ರಕಾಂತ, ಶಿವಕುಮಾರ ಗಂಗಾನಗರ, ಸಿದ್ದಣ್ಣ ಜಮಾದಾರ, ಸಾವಿತ್ರಿ ಬಿರಾದಾರ, ಲಕ್ಷ್ಮೀ ಆಳಂದ, ಉದಯ ಸಾಗರ, ಮಲ್ಲಿಕಾರ್ಜುನ ಜಾನಿ ಕಾರ್ಯಕ್ರಮ ನಡೆಸಿಕೊಟ್ಟರು.