ಹೆಗ್ಗನದೊಡ್ಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಾಳಪ್ಪ ಪೂಜಾರಿ ಆಯ್ಕೆ

ಶಹಾಪುರ :ಆ.5: ಶಹಾಪುರ ಮತಕ್ಷೇತ್ರದ ಹೆಗ್ಗನದೊಡ್ಡಿ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ನಿಗದಿ ಪಡಿಸಿದ ಚುನಾವಣೆಗೆ ಮಾಳಪ್ಪ ತಂದೆ ನಾಗಪ್ಪ ಗೋಷಿ ಹೊರತು ಪಡಿಸಿದರೆ ಯಾರು ನಾಮಿನೇಷನ್ ಮಾಡದೇ ಇರುವುದರಿಂದ ಚುನಾವಣೆ ಅಧಿಕಾರಿಗಳು ಮಾಳಪ್ಪ ತಂದೆ ನಾಗಪ್ಪ ಗೋಷಿ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದರು ಅದೇ ರೀತಿಯಾಗಿ ಉಪಾಧ್ಯಕ್ಷರ ಚುನಾವಣೆಗೆ ಪಾರ್ವತಿ ಗಂಡ ಲೋಕೇಶ್ ಚೌವ್ಹಾಣ್ ಅವರು ನಾಮಿನೇಷನ್ ಮಾಡಿದರು ಯಾರು ಪ್ರತಿ ಸ್ಪರ್ಧಿಯಾಗಿ ಯಾರು ನಾಮನೇಷನ್ ಮಾಡಿದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆಯಾದ ನಂತರ ಮುಖಂಡರಾದ ಶ್ರೀ ಸಿದ್ದನಗೌಡ ಪೆÇೀಲಿಸ್ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಬಾಪುಗೌಡ ಪಾಟೀಲ್ ಡಿಸಿಸಿ ಬ್ಯಾಂಕ ನಿರ್ದೇಶಕರಿಗೆ ನೂತನ ಅಧ್ಯಕ್ಷರೂ ಉಪಾಧ್ಯಕ್ಷರು ಸೇರಿಕೊಂಡು ಮುಖಂಡರಿಗೆ ಸನ್ಮಾನಿಸಿದರು ಅವಳಿ ಗ್ರಾಮಗಳಾದ ಹೆಗ್ಗನದೊಡ್ಡಿ – ಗೋಡ್ರಿಹಾಳದಲ್ಲಿ ಸಂಭ್ರಮ ಸಡಗರ ಪಟಾಕಿ ಸಿಡಿಸಿ ಅಧ್ಯಕ್ಷ ಉಪಾಧ್ಯಕ್ಷರನ್ನು ಮೆರವಣಿಗೆ ಮಾಡುವುದರ ಮುಖಾಂತರ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದ ನಂತರ ಅಧ್ಯಕ್ಷರು ಉಪಾಧ್ಯಕ್ಷರು ಊರಿನ ಮುಖಂಡರು ಗಣ್ಯರು ಯುವಕರು ಪಕ್ಷದ ಕಾರ್ಯಕರ್ತರು ಸೇರಿಕೊಂಡು ವಾಹನಗಳ ಮುಖಾಂತರ ಭೀಮರಾಯನಗುಡಿಗೆ ಆಗಮಿಸಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರಿಗೂ ಮತ್ತು ಮರಿಗೌಡ ಪಾಟೀಲ್ ಹುಲ್ಕಲ್ ಶಿವಮಾಂತ ಚಂದಾಪುರ, ಅವರಿಗೆ ಸನ್ಮಾನಿಸಲಾಯಿತು.

ನಂತರ ಸಚಿವರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅವರು ಕೂಡ ಸನ್ಮಾನಿಸಿದರು ಈ ಸಂದರ್ಭದಲ್ಲಿ ಭಾಗವಹಿಸಿ ಮುಖಂಡರಾದ ಶ್ರೀ ಗೋವಿಂದಪ್ಪ ದೊರೆ, ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಶ್ರೀ ಮಾನಪ್ಪ ಸುಗೂರ, ನಾಗಣ್ಣ ಪೂಜಾರಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ರಾಮಣ್ಣ ಅಡ್ಡಮನಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ದೇವಣ್ಣ ದೊರೆ,ಶಿವಕಾಂತ ರೈಟರ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ,ಲಾಳೆಪಟೇಲ್ ಅಂಗಡಿ,ಈರಘಂಟೆಪ್ಪ ಮಡಿವಾಳರ, ಲಾಲೂ ಚೌವ್ಹಾಣ್, ಶಿವಪುತ್ರಪ್ಪ ಅಂಗಡಿ, ಸಿದ್ದಯ್ಯ ಗುತ್ತೇದಾರ. ಸಂಗಮೇಶ ಕೋಳೂರು ಪಿಡ್ಡಪ್ಪ ದೊರೆ ,ಕರೆಪ್ಪ ಪೂಜಾರಿ. ಇನ್ನೂ ಹಲವಾರು ಹಿರಿಯರು ಗಣ್ಯರು ಮುಖಂಡರು ಯುವಕರು ಇದ್ದರು