ಹೆಗ್ಗಡದಿನ್ನಿಯಲ್ಲಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ವಾಸ್ತವ್ಯ

ಸಿರವಾರ.ಡಿ.೩೧- ದೇವದುರ್ಗ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಜಿ.ಕರೆಮ್ಮ ನಾಯಕ ಗುರುವಾರ ಸಮೀಪದ ಯರಮರಸ್,ನೀಲಗಲ್, ತಿಪ್ಪಲದಿನ್ನಿ,ನಾಗಡದಿನ್ನಿ, ಗ್ರಾಮದಲ್ಲಿ ಹೆಗ್ಗಡದಿನ್ನಿ ಗ್ರಾಮ ವಾಸ್ತವ್ಯವನ್ನು ಮಾಡವ ಮುನ್ನ ಜನರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ನಂತರ ಸುದ್ದಿಗಾರೊಂದಿಗೆ ಮಾತನಾಡಿ ದೇವದುರ್ಗ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಆರಂಭವಾಗಿದೆ. ಬಿಜೆಪಿ-ಕಾಂಗ್ರೆಸ್ ಒಳ ಒಪ್ಪಂದವಾಗಿದೆ. ಎರಡು ಕುಟುಂಬದ ಸದಸ್ಯರು ಶಾಸಕರು, ಸಂಸದರು ಆಗಬೇಕು, ಪಕ್ಷಕ್ಕೆ ದುಡಿದ ಕಾರ್ಯಕರ್ತೆರಿಗೆ ಮೋಸಮಾಡಿದ್ದಾರೆ, ಜಿ.ಪಂ.ಉಪ ಚುನಾವಣೆಯಲ್ಲಿ ತಮ್ಮ ಸಂಬಂಧಿಕರಿಗೆ ಮಣೆ ಹಾಕಿದ್ದಾರೆ. ಮುಂಬರುವ ವಿಧಾನ ಸಭೆಯಲ್ಲಿ ಎರಡು ಪಕ್ಷದ ಅಭ್ಯರ್ಥಿಗೆ ತಕ್ಕಪಾಠ ಕಲಿಸಲು ಮತದಾರರು ಕಾದುಕುಳಿತ್ತಿದ್ದಾರೆ, ಅಭಿವೃದ್ಧಿ ಕಾರ್ಯಗಳು ಶೂನ್ಯ, ಸ್ವಯಂ ಅಭಿವೃದ್ಧಿಯಾಗಿದ್ದಾರೆ, ಸರಕಾರದ ಹಣ ಲೂಟಿಮಾಡಿದ್ದಾರೆ ಎಂದು ಆರೋಪಿಸಿ ತಾಲೂಕಿನ ೧೪ ಗ್ರಾ.ಪಂ ಹಳ್ಳಿಗಳಲ್ಲಿ ಅದ್ದೂರಿ ಸ್ವಾಗತಿಸಿ ಮನೆ ಮಗಳಂತೆ ನೋಡಿಕೊಂಡಿದ್ದಾರೆ, ಮತದಾರರು ಆಶಿರ್ವಾದ ಮಾಡಲಿದ್ದಾರೆ, ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಿಎಂ. ಹೆಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಯನ್ನು ಜನರಿಗೆ ಮನವರಿಕೆ ಹಾಗೂ ಪಕ್ಷದ ಸಂಘಟನೆಯಾಗಿದೆ ಎಂದರು. ಮಹಿಳೆಯರಿಂದ ಉಡಿ ತುಂಬುವ ಕಾರ್ಯ ಜರುಗಿತು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್, ಸಿರವಾರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ನಾಗರಾಜಗೌಡ ಡಿಎನ್.ವೈ,
ಖಾಜನಗೌಡ ಅಬಕಾರಿ ಗಬ್ಬೂರು, ಉಮೇಶಗೌಡ ಎನ್ ಗಣೇಕಲ್, ಬಸವರಾಜ ಯರಮಸನಾಳ, ಪುರಸಭೆ ಸದಸ್ಯೆ ಶಾಲಂ, ಮೈಹಿಬೂಬ್ ಹೆಗ್ಗಡದಿನ್ನಿ, ಇಸಾಕ್ ಮೇತ್ರಿ, ಶಿವನಗೌಡ ಕಕ್ಕದೊಡ್ಡಿ, ರಾಮೇಶ ನಾಯಕ ಜಾಡಲದಿನ್ನಿ, ವಿಠೋಬನಾಯಕ ಜಾಲಹಳ್ಳಿ, ಅಲ್ಪಸಂಖ್ಯಾತರ ವಿಭಾಗ ಅಧ್ಯಕ್ಷ ರಾದ ಶಾಮೀನಿ ಉದ್ದಾರ್, ರವಿಕುಮಾರ್ ಜಾಡಲದಿನ್ನಿ ಸೇರಿದಂತೆ ಜೆಡಿಸ್ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.