ಹೆಂಡ್ತಿಗೆ 2 ಸಾವಿರ, ಗಂಡನ ತಲೆಗೆ 95 ಸಾವಿರ ಸಾಲದಹೊರೆ!: ಎನ್.ಮಹೇಶ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.24- ಸಿದ್ದರಾಮಯ್ಯ ಸರ್ಕಾರ ಎಡವಟ್ಟಿನ, ಮೋಸಗಾರ ಸರ್ಕಾರ ಎಂದು ಬಿಜೆಪಿ ಉಪಾಧ್ಯಕ್ಷಎನ್.ಮಹೇಶ್ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಮೂಲಕ ಸಿದ್ದಮ್ಮನಿಗೆ 2 ಸಾವಿರ ಹಣ ಕೊಟ್ಟುಗಂಡ ಸಿದ್ದಪ್ಪನ ತಲೆ ಮೇಲೆ 95 ಸಾವಿರರೂ. ಸಾಲದ ಹೊರೆ ಇಟ್ಟಿದ್ದಾರೆ, ಈಗಾಗಲೇ ಸಿದ್ದರಾಮಯ್ಯ 96 ಸಾವಿರಕೋಟಿ ಸಾಲ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ಪ.ಜಾತಿ ಹಾಗೂ ಪಂಗಡಕ್ಕೆ 36ಸಾವಿರ ಕೋಟಿ ಅನುದಾನ ಕೊಟ್ಟು ಅದರಲ್ಲಿ ಗ್ಯಾರಂಟಿ ಯೋಜನೆಗಾಗಿ 14 ಸಾವಿರಕೋಟಿ ಬಳಸಿಕೊಂಡಿದ್ದಾರೆ ಇದೊಂದು ಮಾರಕಕ್ರಮ, ಸಿದ್ದರಾಮಯ್ಯ ಸರ್ಕಾರದಲಿತ ವಿರೋಧಿ , ಮೋಸಗಾರ ಸರ್ಕಾರ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಸದನದ ಒಳಗೆ ಆರ್. ಅಶೋಕ್ ಮತ್ತು ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು ಬಿಜೆಪಿ ಕಾರ್ಯಕರ್ತರು ರಾಜ್ಯದ ಎಲ್ಲೆಡೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ, ನುಡಿದಂತೆ ನಡೆದುಕೊಳ್ಳಿ ಎಂದು ಕಾಂಗ್ರೆಸ್ ನವರಿಗೆ ಮನವರಿಕೆ ಮಾಡಿದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಒತ್ತಾಯಿಸುತ್ತಿದ್ದೇವೆ ಎಂದರು.