ಹೆಂಡತಿ ಬಗ್ಗೆ ಬಹಿರಂಗವಾಗಿ ದೂರಿದ ಶಾರುಖ್

ಮುಂಬೈ.ಮೇ೧೬:ಶಾರುಖ್ ಖಾನ್ ನಟನೆ ಮಾತ್ರವಲ್ಲದೇ, ಅವರ ಮಾತಿನ ಚಾತುರ್ಯದ ಬಗ್ಗೆಯೂ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದೀಗ ಹೆಂಡತಿ ಬಗ್ಗೆ ಸಿಹಿ ದೂರೊಂದನ್ನು ಅವರು ಬಹಿರಂಗವಾಗಿ ತಿಳಿಸಿದ್ದಾರೆ. ನಟ ಶಾರುಖ್ ಖಾನ್ ಹೆಂಡತಿ ಗೌರಿ ಖಾನ್ ವಿನ್ಯಾಸದಲ್ಲಿ ಅತ್ಯಾಸಕ್ತಿಯನ್ನು ಹೊಂದಿದ್ದು, ಸಾಕಷ್ಟು ಬೇಡಿಕೆ ಪಡೆದಿದ್ದಾರೆ. ಖ್ಯಾತ ವಿನ್ಯಾಸಕಿಯಾಗಿ ಹೆಸರು ಮಾಡಿರುವ ಹೆಂಡತಿ ಗೌರಿ ಖಾನ್ ಬಗ್ಗೆ ನಟ ಶಾರುಖ್ ಖಾನ್ ದೂರಿದ್ದಾರೆ. ಜಗತನ್ನು ನೀರಿಕ್ಷಿಸಿದಂತೆ ಅದ್ಬುತವಾಗಿ ಮರು ವಿನ್ಯಾಸ ಮತ್ತು ಡಿಸೈನ್ ಮಾಡುವ ಗೌರಿ ತಮ್ಮ ಕೋಣೆಯನ್ನು ಮಾತ್ರ ವಿನ್ಯಾಸ ಮಾಡಿಲ್ಲ ಎಂದಿದ್ದಾರೆ.
ಗೌರಿ ಖಾನ್? ಅವರ ಮೈ ಲೈಫ್ ಇನ್ ಡಿಸೈನ್ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿರುವ ನಟ ಶಾರುಖ್ ಹೆಂಡತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಈ ರೀತಿಯಾಗಿ ಕಾಲೆಳೆದಿದ್ದಾರೆ.ಪುಸ್ತಕದ ಕುರಿತು ಮಾತನಾಡಿದ ಅವರು, ಆಕೆ ಪುಸ್ತಕದಲ್ಲಿ ಏನನ್ನು ಬರೆದಿದ್ದಾರೆ. ಯಾವ ಅಂಶ ಸೇರಿಸಿದ್ದಾರೆ ಎಂಬುದನ್ನು ನೋಡಲು ತಾನು ಕೂಡ ಕಾತುರನಾಗಿದ್ದೇನೆ. ಒಂದು ವೇಳೆ ಆಕೆ ತನ್ನ ಕೋಣೆಯನ್ನು ನನಗಾಗಿ ವಿನ್ಯಾಸ ಮಾಡಲು ಮುಂದಾದರೆ, ರಿಯಾಯತಿ ದರದಲ್ಲಿ ಮಾಡುವಂತೆ ಅವಳನ್ನು ಕೇಳುತ್ತೇನೆ ಎಂದು ಕೂಡ ತಿಳಿಸಿದ್ದಾರೆ. ಸಿನಿಮಾ ನಿರ್ಮಾಣದ ಹೊರತಾಗಿ ಒಳಾಂಗಣ ವಿನ್ಯಾಸದಲ್ಲಿ ಗೌರಿ ವೃತ್ತಿಪರ ಯಶಸ್ಸು ಕಂಡಿದ್ದಾರೆ. ಆಕೆ ಪುಸ್ತಕದಲ್ಲಿ ತಮ್ಮ ವೃತ್ತಿಪರ ಪಯಣದ ಜೊತೆಗೆ ಕುಟುಂಬ ಮತ್ತು ಮಕ್ಕಳಾದ ಆರ್ಯನ್, ಸುಹಾನ ಮತ್ತು ಅಬ್‌ರಾಮ್ ಕುರಿತು ಕೂಡ ಅವರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ, ಶಾರಖ್ ಅವರ ಮುಂಬೈ ನಿವಾಸ ಮನ್ನತ್ ಇದೊಂದು ಹೆರಿಟೇಜ್ ವಿಲ್ಲಾ ಆಗಿದ್ದು, ಈ ಕಟ್ಟದ ವಿನ್ಯಾಸ ಸೇರಿದಂತೆ ಅವುಗಳ ಪ್ರಕ್ರಿಯೆ ಸೇರಿದಂತೆ ಕೆಲವು ಪ್ರಮುಖ ಪ್ರಾಜೆಕ್ಟ್ ವಿವರಗಳನ್ನು ಅವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಜೊತೆಗೆ ಶಾರುಖ್ ಖಾನ್ ಹೆಚ್ಚು ಸಮಯ ಕಳೆಯುವ ಲೈಬ್ರರಿ ವಿನ್ಯಾಸ ಮತ್ತು ಕುಟುಂಬ ಇಷ್ಟವಾದ ಸ್ಥಳಗಳ ಕೆಲಸಗಳ ಕುರಿತು ತಿಳಿಸಲಾಗಿದ್ದು, ಮನ್ನತ ನ ಸೌಂದರ್ಯವೂ ಈ ಪುಸ್ತಕದಲ್ಲಿ ದಾಖಲಾಗಿದೆ.ಇನ್ನು ಇಂಟಿರೀಯರ್ ಡಿಸೈನರ್ ಆಗಿರುವ ಸಿನಿಮಾ ನಿರ್ದೇಶಕಿ ಗೌರಿ, ಈ ಕ್ಷೇತ್ರವನ್ನು ಆರಿಸಿಕೊಂಡು ಕಾರ್ಯ ನಿರ್ವಹಿಸುವವರಿಗೆ ಕೆಲವು ಸಲಹೆಯನ್ನು ನೀಡಿದ್ದಾರೆ.
ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಆಕರ್ಷಣೆ ಜೊತೆಗೆ ಜಗತ್ತನ್ನು ತಮ್ಮ ವಿನ್ಯಾಸದಿಂದ ಪ್ರೇರೇಪಿಸಬೇಕು ಎಂದಿದ್ದಾರೆ.