ಹೆಂಡತಿಯನ್ನು ಹೊರಹಾಕಿ ಬಾಲ್ಯವಿವಾಹ ಮಾಡಿಕೊಂಡ ಪತಿಯ ಬಂಧನಕ್ಕೆ ಆಗ್ರಹಿಸಿ ನಾಳೆ ಪ್ರತಿಭಟನೆ

ಕಲಬುರಗಿ,ನ.15- ಕಳೆದ ನಾಲ್ಕು ವರ್ಷಗಳ ಹಿಂದೆ ಕರದಳ್ಳಿ ಗ್ರಾಮದ ಮಹಾಲಕ್ಷ್ಮೀಯನ್ನು ವಿವಾಹ ಮಾಡಿಕೊಂಡ ಗೌನಳ್ಳಿ ಗ್ರಾಮದ ಮಹಾದೇವ ತಳವಾರ ತನ್ನ ಪತ್ನಿಯನ್ನು ಮನೆಯಿಂದ ಹೊರಹಾಕಿ ಬಾಲ್ಯವಿವಾಹ ಮಾಡಿಕೊಂಡಿದ್ದಾನೆ ಎಂದು ವೀರ ಕನ್ನಡಿಗರ ಸೇನೆ ಅಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ ಮತ್ತು ಗಂಡನಿಂದ ಅನ್ಯಾಯಕ್ಕೋಳಗಾದ ಮಹಾಲಕ್ಷ್ಮೀ ಮಹಾದೇವ ತಳವಾರ ಅವರು ದೂರಿದ್ದಾರೆ.
ಪತ್ರಿಕಾಭವನದಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮೀಗೆ ಒಂದು ಹೆಣ್ಣುಮಗು ಇದೆ, ಗಂಡ ಮತ್ತು ನಾದಿನಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು, ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಇವರ ವಿರುದ್ಧ ಗ್ರಾಮೀಣ ಮಹಿಳಾ ಪೊಲೀಸ ಠಾಣೆಗೆ ದೂರ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ
ಮಹಾದೇವ ತಳವಾರ ಗೌಡಳ್ಳಿ ಅವರು, ತಮ್ಮ ಸಂಬಂಧಿಯ 16 ವರ್ಷದ ಬಾಲಕಿಯೊಂದಿಗೆ ಬಾಲ್ಯವಿವಾಹ ಮಾಡಿಕೊಂಡಿರುತ್ತಾರೆ, ಈ ಕುರಿತು ಗಂಡನನ್ನು ಪ್ರಶ್ನಿಸಿದ್ದಕ್ಕೆ ದೌರ್ಜನ್ಯ ವೆಸಗಿದ್ದಾರೆ.
ಮಹಾದೇವ ತಳವಾರ ಅವರು, ತಮ್ಮ ಮನೆಯಿಂದ ಒಂದುವರೆ ವರ್ಷದ ಹೆಣ್ಣು ಮಗುವಿನೊಂದಿಗೆ ತನ್ನನ್ನು ಹೊರ ದಬ್ಬಿದ್ದಾರೆ ಎಂದು ಮಹಾದೇವಿ ಹೇಳಿದರು, ತನ್ನ ಪತಿ ಮಹಾದೇವ ತಳವಾರ ಅವರು, ಬಾಲ್ಯ ವಿವಾಹ ಮಾಡಿಕೊಂಡಿರುವÀ ಬಾಲಕಿಯ ಜನ್ಮದಿನ ದೃಡಪಡಿಸುವ ಶಾಲೆಯ ಪ್ರಮಾಣ ಪತ್ರಗಳ ಸಮೇತ ಇಲಾಖೆಯ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಅಲ್ಲದೇ ಈ ಮೊದಲು ಕಲಬುರಗಿ ಗ್ರಾಮೀಣ ಮಹಿಳಾ ಪೊಲೀಸ ಠಾಣೆಯಲ್ಲಿ ಹಾಗೂ ಸೇಡಂ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಮ್ಮ ಮೇಲಾಗಿರುವ ದೌರ್ಜನ್ಯದ ಕುರಿತು ದೂರು ನೀಡಿದರೂ ಇಲ್ಲಿಯ ವರೆಗೂ ಯÁವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮಹಾಲಕ್ಷ್ಮೀ ತಳವಾರ ಗೌಡಳ್ಳಿ ಅವರಿಗೆ ಗಂಡನಿಂದ ಆಗಿರುವ ಅನ್ಯಾಯವನ್ನು ಖಂಡಿಸಿ ಹಾಗೂ ಬಾಲ್ಯ ವಿವಾಹ ಮಾಡಿಕೊಂಡಿರುವ ಮಹಾದೇವ ತಳವಾರÀ ವಿರುದ್ದ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ನಾಳೆ ನ.16ರ ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಕಲ್ಯಾಣ ಕಛೇರಿಯ ಎದುರು ಪ್ರತಿಭಟನೆ ಕೈಗೊಂಡು ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ಅಮೃತ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುರೇಷ ಬಡಿಗೇರ, ರವಿ ಒಂಟಿ, ಭಾಗಮ್ಮ ಚೌದರಿ, ಮಹಾಲಕ್ಷ್ಮೀ ಮಹಾದೇವ ತಳವಾರ, ಅನುಸೂಯಾ ಹಿರೇಮಠ, ಪೂಜಾ ಜಮಾದಾರ, ಭಾಗ್ಯಶ್ರೀ ಪೂಜಾರಿ, ಶಿವಾನಂದ ಚಿಕ್ಕಾಣಿ, ಸಿದ್ದು ಕಂದಗಲ, ರಜನಿಕಾಂತ ಭೋವಿ, ಅಣವೀರಗೌಡ, ಪ್ರಶಾಂತ ಬಾಚನಳ್ಳಿ, ಪವನಕುಮಾರ ಇದ್ದರು.