ಹೆಂಡತಿಗೆ ಸುಳ್ಳು ಹೇಳಿ ಫಿಲ್ಮ್ ದೃಶ್ಯದಲ್ಲಿ ನಾಯಕಿಗೆ ಚುಂಬನ ನೀಡಿದರು ರಜನೀಶ್ ದುಗ್ಗಲ್ ಗೆ ಈಗಲೂ ಪಶ್ಚಾತ್ತಾಪ

ನಟ ರಜನೀಶ್ ದುಗ್ಗಲ್ ಅವರ ಜೀವನದಲ್ಲಿ ಬಿರುಗಾಳಿ ಎದ್ದ ಘಟನೆಯನ್ನು ನೆನಪಿಸಿದ್ದಾರೆ. ಅವರು ತಮ್ಮ ಹೆಂಡತಿಯ ಬಳಿ ಮರೆಮಾಚಿದ ಸಂಗತಿಯೊಂದು ರಾದ್ದಾಂತಕ್ಕೆ ಕಾರಣವಾಗಿತ್ತು. ನಂತರ ಇವರ ವೈವಾಹಿಕ ಜೀವನದಲ್ಲಿ ಬಿರುಕು ಬೀಳುವ ಹಂತಕ್ಕೆ ತಲುಪಿತ್ತು.
ಈಗ ಬಾಲಿವುಡ್ ಚಿತ್ರಗಳಲ್ಲಿ ಇಂಟಿಮೇಟ್ ಮತ್ತು ಬೋಲ್ಡ್ ದೃಶ್ಯಗಳು ಇರುವುದು ಸಾಮಾನ್ಯವಾಗಿದೆ. ಹಾಗಿದ್ದರೂ ಭಯಾನಕ ಫಿಲ್ಮ್ ’೧೯೨೦ ’ ರ ಖ್ಯಾತಿಯ ರಜನೀಶ್ ದುಗ್ಗಲ್ ತನ್ನ ಹೆಂಡತಿಗೆ ವಂಚಿಸಿ ಒಂದು ಚುಂಬನ ದೃಶ್ಯಕ್ಕೆ ಒಪ್ಪಿದ ಘಟನೆ ಹೇಳಿದ್ದಾರೆ.
ಅನೇಕ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿರುವ ರಜನೀಶ್ ದುಗ್ಗಲ್ ಅವರು ಸಿದ್ಧಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನ ಮತ್ತು ಚಲನಚಿತ್ರಗಳ ದೃಶ್ಯದಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.
ಆ ಸಮಯದಲ್ಲಿ, ರಜನೀಶ್ ತನ್ನ ವೃತ್ತಿಜೀವನದ ಆರಂಭದ ಹಂತದಲ್ಲಿ, ಹಣಕ್ಕಾಗಿ ಮಾತ್ರ ಚಲನಚಿತ್ರಗಳನ್ನು ಮಾಡುತ್ತಿದ್ದೆ ಎಂದು ಹೇಳಿದರು.ಅದರಲ್ಲಿ ‘ವಜಾ ತುಮ್ ಹೋ’ ಚಿತ್ರವೂ ಒಂದು. ಈ ಚಿತ್ರ ಮಾಡಲು ಇವರು ತನ್ನ ಹೆಂಡತಿಗೇ ಸುಳ್ಳು ಹೇಳಬೇಕಾದ ಸಂದರ್ಭ ಬಂದಿತ್ತು, ಇದಕ್ಕಾಗಿ ಅವರು ಯಾವಾಗಲೂ ವಿಷಾದಿಸುತ್ತಾರೆ.
ಚುಂಬನದ ದೃಶ್ಯಕ್ಕೆ ಹೇಗೆ ಒಪ್ಪಿಗೆ??:
’ಲೀಲಾ’ ಫಿಲ್ಮ್ ಮತ್ತು ’ವಜಾ ತುಮ್ ಹೋ’ ಹೊರತುಪಡಿಸಿ ತಾನುಎಂದಿಗೂ ಚಲನಚಿತ್ರಗಳಲ್ಲಿ ಚುಂಬನ, ಮತ್ತು ಆತ್ಮೀಯ, ಕಾಮಪ್ರಚೋದಕ ದೃಶ್ಯಗಳನ್ನು ನೀಡಿಲ್ಲ ಎಂದು ರಜನೀಶ್ ದುಗ್ಗಲ್ ಹೇಳಿದರು. ಈ ಬಗ್ಗೆ ತನ್ನ ಪತ್ನಿ ಪಲ್ಲವಿ ಬಳಿಯೂ ಮಾತನಾಡಿದ್ದೆ. ನನಗೆ ಈ ರೀತಿಯ ದೃಶ್ಯಗಳು ಬೇಡ ಎಂದು. ನಂತರ ನನ್ನನ್ನು ಕ್ರಿಯೇಚರ್ ವಿತ್ ಸುರ್ವೀನ್ ಚಾವ್ಲಾ ಚಿತ್ರದ ಮೊಹಬ್ಬತ್ ಬರ್ಸಾ ದೇ ಹಾಡಿಗೆ ಕರೆದರು. ಅದರಲ್ಲಿ ಚುಂಬನದ ದೃಶ್ಯವಿದ್ದು, ನಾನು ಅದನ್ನು ಮಾಡಲು ಹೋಗುವುದಿಲ್ಲ ಎಂದೂ ಹೇಳಿದೆ. ಇದು ನನ್ನ ವಲಯವಲ್ಲ ಎಂದೆ.
ಈ ಬಗ್ಗೆ ನಿರ್ದೇಶಕರು ನಂತರ “ನಾನು ನಿಮ್ಮ ’ಲೀಲಾ’ ಚಿತ್ರವನ್ನು ನೋಡಿದ್ದೇನೆ, ಅದರಲ್ಲಿ ಸನ್ನಿ ಲಿಯೋನ್ ಜೊತೆ ನಿಮ್ಮ ಬೋಲ್ಡ್ ದೃಶ್ಯಗಳಿವೆ” ಎಂದು ಹೇಳಿದರು. ಅವರ ಒತ್ತಾಯದ ಮೇರೆಗೆ ನಾನು ಆ ದೃಶ್ಯವನ್ನು ಮಾಡಬೇಕಾಯಿತು. ಆದರೆ ಪ್ರೇಕ್ಷಕರು ನನ್ನ ಶೈಲಿಯನ್ನು ಇಷ್ಟಪಡಲಿಲ್ಲ.
ಹೆಂಡತಿಗೆ ಮೋಸ ಮಾಡಿದ ನಂತರ…?.:
ಈ ಚಿತ್ರಗಳು ಮತ್ತು ಹಾಡುಗಳ ನಂತರ, ನಾನು ಮತ್ತೆ ಈ ರೀತಿಯ ಅವ ದೃಶ್ಯವನ್ನೂ ಮಾಡಲು ಹೋಗುವುದಿಲ್ಲ ಎಂದು ಪಲ್ಲವಿಗೆ ಹೇಳಿದ್ದೆ. ಆದರೆ ಆ ನಂತರ ನಾನು ‘ವಜಾ ತುಮ್ ಹೋ’ ಚಿತ್ರಕ್ಕೆ ಸಹಿ ಮಾಡಿದೆ. ಈ ಸಿನಿಮಾದ ಹಾಡಿನಲ್ಲಿ ಮತ್ತೆ ‘ದಿಲ್ ಮೇ ಚುಪಾಲುಂಗಾ’ ಹಾಡಿನಲ್ಲಿ ನಟಿ ಸನಾ ಖಾನ್ ಜೊತೆ ಅನ್ಯೋನ್ಯವಾಗಬೇಕಿತ್ತು. ನಾನು ಈ ದೃಶ್ಯವನ್ನು ಮಾಡಲು ಬಯಸುವುದಿಲ್ಲ ಎಂದು ನನ್ನ ನಿರ್ದೇಶಕರಿಗೆ ಮನವರಿಕೆ ಮಾಡುತ್ತೇನೆ ಎಂದು ಆರಂಭದಲ್ಲಿ ಯೋಚಿಸಿದ್ದರೂ ಅದು ಕೂಡಾ ಫಲಿಸಲಿಲ್ಲ.
ನನ್ನ ಹೆಂಡತಿಗೆ ಹೇಳದೆ ನಟಿಯೊಂದಿಗೆ ಇಂಟಿಮೇಟ್ ದೃಶ್ಯಗಳನ್ನು ನೀಡಿದ್ದೆ. ಈ ವಿಷಯ ತಿಳಿದ ನಂತರ ಪತ್ನಿ ತುಂಬಾ ಕೋಪಗೊಂಡಳು.
ಹೆಂಡತಿಯೊಂದಿಗಿನ ಸಂಬಂಧದಲ್ಲಿ ಬಿರುಕು!: ಈ ಹಾಡಿನಿಂದಾಗಿ ನನ್ನ ಮತ್ತು ಪಲ್ಲವಿ ನಡುವೆ ಭಾರೀ ಜಗಳವಾಗಿತ್ತು. ಅದು ನನ್ನದೇ ತಪ್ಪು ಎಂದು ನನಗೆ ತಿಳಿದಿತ್ತು, ನಾನು ಅವಳಿಗೆ ಮೋಸ ಮಾಡಿದೆ. ನಾನು ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದೆಲ್ಲ ಭರವಸೆ ನೀಡಿದೆ. ಅದರ ನಂತರವೂ ನಾನು ಮತ್ತೆ ಹಾಗೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದರೂ ಎಲ್ಲೋ ಇದು ನನ್ನ ಮತ್ತು ಪಲ್ಲವಿ ನಡುವಿನ ಸಂಬಂಧದಲ್ಲಿ ಎಂದಿಗೂ ಮುಗಿಯದ ಬಿರುಕು ಸೃಷ್ಟಿಸಿತು ಎಂದು ನಾನು ನಂಬುವ ಸ್ಥಿತಿಗೆ ಬರಬೇಕಾಯ್ತು ಎಂದರು.

ಸಂಜಯ್ ದತ್ ರಿಂದ ಹಿಡಿದು ಜಾಹ್ನವಿ ಕಪೂರ್ ಅವರ ತಾಯಿಯವರೆಗೆ

ತಮ್ಮ ಮಕ್ಕಳು ಸೂಪರ್‌ಸ್ಟಾರ್ ಆಗುವುದನ್ನು ನೋಡಲು ಬಯಸಿದ್ದರೂ ಆಸೆ ಈಡೇರಲಿಲ್ಲ!

ಬಾಲಿವುಡ್‌ನಲ್ಲಿ ತಮ್ಮ ಮಕ್ಕಳು ಸೂಪರ್‌ಸ್ಟಾರ್ ಆಗುವುದನ್ನು ನೋಡಬೇಕೆಂದು ಇಚ್ಚಿಸಿದ್ದರೂ ಅದು ಈಡೇರದ ಅಥವಾ ತಮ್ಮ ಮಕ್ಕಳ ಚೊಚ್ಚಲ ಚಿತ್ರವನ್ನು ನೋಡದೆ ನಿಧನರಾದ ಆ ತಾಯಂದಿರು ಯಾರು ……?
ಬಾಲಿವುಡ್‌ನಲ್ಲಿ ತಮ್ಮ ಮಕ್ಕಳ ಚೊಚ್ಚಲ ಚಿತ್ರವನ್ನು ನೋಡಲಾಗದ ಅನೇಕ ಅಮ್ಮಂದಿರು ಇದ್ದಾರೆ. ತಮ್ಮ ಮಕ್ಕಳನ್ನು ಸಿನಿಮಾದಲ್ಲಿ ನೋಡುವ ಮುನ್ನವೇ ಈ ತಾಯಂದಿರು ಜಗತ್ತಿಗೆ ವಿದಾಯ ಹೇಳಿದರು. ಇವರಲ್ಲಿ ಕೆಲವು ತಾಯಂದಿರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರೆ ಕೆಲವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆದರೆ ಈ ತಾಯಂದಿರಿಗೆ ತಮ್ಮ ಮಕ್ಕಳು ಸೂಪರ್ ಸ್ಟಾರ್ ಆಗಬೇಕು ಎಂಬ ಕನಸಿತ್ತು. ಆದರೆ, ಇಂದು ಈ ಮಕ್ಕಳು ಬಾಲಿವುಡ್‌ನಲ್ಲಿ ತಮ್ಮ ಬಾವುಟ ಹಾರಿಸಿ, ತಮ್ಮ ತಾಯಿಯ ಕನಸನ್ನು ನನಸಾಗಿಸುತ್ತಿದ್ದಾರೆ.


ಶಾರುಖ್ ಖಾನ್ ತಾಯಿ ಲತೀಫ್ ಫಾತಿಮಾ ಖಾನ್:
ಶಾರುಖ್ ಖಾನ್ ಅವರನ್ನು ಇಂದು ಬಾಲಿವುಡ್ ಕಿಂಗ್ ಎಂದು ಕರೆಯಲಾಗುತ್ತದೆ, ಆದರೆ ಅವರ ತಾಯಿ ಲತೀಫ್ ಫಾತಿಮಾ ಖಾನ್ ಅವರ ಮೊದಲ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂಬುದು ನಿಮಗೆ ತಿಳಿದಿದೆಯೇ. ಶಾರುಖ್ ಖಾನ್ ಅವರ ಮೊದಲ ಚಿತ್ರ ದೀವಾನಾ ಬಿಡುಗಡೆಗೆ ಮುಂಚೆಯೇ ಅವರ ತಾಯಿ ನಿಧನರಾದರು.
ಸಂಜಯ್ ದತ್ ತಾಯಿ ನರ್ಗೀಸ್ ದತ್:
ಸಂಜಯ್ ದತ್ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ೧೯೮೧ ರಲ್ಲಿ ರಾಕಿ ಚಿತ್ರದೊಂದಿಗೆ ಪ್ರಾರಂಭಿಸಿದರು, ಆದರೆ ಅವರ ಚಿತ್ರ ಬಿಡುಗಡೆಯಾಗುವ ಮೊದಲೇ ಅವರ ತಾಯಿ ನಿಧನರಾದರು. ನರ್ಗೀಸ್ ಯಾವಾಗಲೂ ತನ್ನ ಮಗ ಚಲನಚಿತ್ರ ತಾರೆಯಾಗಬೇಕೆಂದು ಬಯಸುತ್ತಿದ್ದರು ಎಂದು ನಂಬಲಾಗಿತ್ತು. ನರ್ಗಿಸ್ ದತ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ
ಜಾಹ್ನವಿ ಕಪೂರ್ ತಾಯಿ ಶ್ರೀದೇವಿ:
೨೦೧೮ ರಲ್ಲಿ, ಜಾಹ್ನವಿ ಕಪೂರ್ ಧಡಕ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ಚಿತ್ರದ ಬಿಡುಗಡೆಗಾಗಿ ಶ್ರೀದೇವಿ ಕಾತರದಿಂದ ಕಾಯುತ್ತಿದ್ದರು. ಆದರೆ ಇದಕ್ಕೂ ಮುನ್ನ ಶ್ರೀದೇವಿ ನಿಗೂಢವಾಗಿ ಸಾವನ್ನಪ್ಪಿದ್ದರು.
ಅರ್ಜುನ್ ಕಪೂರ್ ತಾಯಿ ಮೋನಾ:
ಅರ್ಜುನ್ ಕಪೂರ್ ತಾಯಿ ಮೋನಾ ಕಪೂರ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ತನ್ನ ಮಗ ನಟನಾಗುವುದನ್ನು ಅವರಿಗೆ ನೋಡಲು ಸಾಧ್ಯವಾಗಲಿಲ್ಲ. ಅವರಿಗೂ ತನ್ನ ಮಗ ನಟನಾಗಬೇಕೆಂಬ ತುಂಬಾ ಆಸೆ ಇತ್ತು.