
ಬೀದರ್:ಮೇ.22: ಇಂದು ಸಾಮಾನ್ಯವಾಗಿ ಬಹುತೇಕರು ಹೃದ್ರೋಗಕ್ಕೆ ಒಳಗಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ರಕ್ತದೊತ್ತಡ ಹಾಗೂ ಮದುಮೇಹ ಕಾಯಿಲೆಗಳು ನೂರಕ್ಕೆ ಶೇಕಡಾ 70 ಪ್ರತಿಶತ ಜನರಿಗೆ ಅವರಿಸಿದ್ದು ಅದು ಮುಂದೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತಿರುವುದು ಕಳವಳಕಾರಿ ಸಂಗತಿ.
ಹಾಗಂತ ಅದನ್ನು ತಡೆಯಲು ಸಾಧ್ಯವಿಲ್ಲ ಅಂತಿಲ್ಲ. ಅನೇಕ ಆಸ್ಪತ್ರೆಗಳಲ್ಲಿ ಹೃದ್ರೋಗಕ್ಕೆ ಅತ್ಯಾಧುನಿಕ ಉಪಕರಣಗಳನ್ನು ಬಳಿಸಿ ರೋಗಿಗಳ ಮನ ಗೆಲ್ಲುವ ಕಾರ್ಯಕ್ಕೆ ಮುಂದಾಗುತ್ತಿರುವರು. ಹಾಗೇ ಬೀದರ್ ನಗರದ ಸುಪ್ರಸಿದ್ಧ ಗುದಗೆ ಮಲ್ಡಿ ಹಾಗೂ ಸೂಪರ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಫ್.ಎಫ್.ಆರ್ ನಂತಹ ಅತ್ಯಾಧುನಿಕ ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣ ಹಚ್ಚುವ ಮೂಲಕ ಹೃದ್ರೋಗಿಗಳ ಅನಾವಶ್ಯಕ ಖರ್ಚಿಗೆ ಬ್ರೇಕ್ ಹಾಕುವ ಮೂಲಕ ಮಾನವಿಯತೆ ಮೆರೆದಿರುತ್ತಾರೆ.
ಭಾನುವಾರವಷ್ಟೆಅತ್ಯಾಧುನಿಕ ಎಫ್.ಎಫ್.ಆರ್ ಮಷಿನ್ ಮೂಲಕ ಓರ್ವ ಹೃದಯ ರೋಗಿ ಪ್ರೇಮಲಾ ಮಠಪತಿ ಅವರ ಹೃದಯ ರೋಗದ ಪ್ರಮಾಣ ಪತ್ತೆ ಹಚ್ಚಿ ಸ್ಟಂಟ್ ಅಳವಡಿಕೆ ಅಗತ್ಯವಿಲ್ಲ ಎಂಬುದನ್ನು ರೋಗಿಯ ಸಂಬಂದಿಕರಿಗೆ ತಿಳಿಸುವ ಮೂಲಕ ನಾಡಿನ ಖ್ಯಾತ ಹೃದಯ ರೋಗ ತಜ್ಞರಾದ ಡಾ.ನಿತೀನ ಗುದಗೆ ಅವರು ಮಾನವಿಯತೆ ಮೆರೆದರಲ್ಲದೇ ಲಕ್ಷಾವಧಿ ಹಣ ವ್ಯಯವಾಗುವುದನ್ನು ಉಳಿಸಿದ್ದಾರೆ.
ಇಂಥ ಮಾನವಿಯತೆ ಮೆರೆದ ಇವರ ಕಾರ್ಯಕ್ಕೆ ಎಲ್ಲೆಡೆ ಜನ ಭೇಷ್ ಎನ್ನುತ್ತಿರುವರು.