ದಾವಣಗೆರೆ.ಮಾ.೨೩: ಹೃದಾಯಘಾತದಿಂದ ಪತ್ರಕರ್ತ ವಿಶ್ವನಾಥ್ ವಿಶ್ವನಾಥ್ ಎನ್.ಎಸ್ ನಿಧನರಾಗಿದ್ದಾರೆ. ಬೇತೂರು ರಸ್ತೆ ಹಾಗೂ ಬಸವರಾಜ ಪೇಟೆ ನಿವಾಸಿಯಾಗಿರುವ ವಿಶ್ವನಾಥ್ ಅವರು ಕಳೆದ ಹಲವಾರು ವರ್ಷಗಳಿಂದ ಸವಿತಾ ಬಂಧು, ಭ್ರಷ್ಟರ ಭೇಟೆ, ವಾಯ್ಸ್ ಆಪ್ ಕ್ರೈ ವಾರ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಬಳ್ಳಾರಿ ಬೆಳಗಾಯಿತು ದಿನ ಪತ್ರಿಕೆಯಲ್ಲಿ ದಾವಣಗೆರೆ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಬಿಡುವಿನ ವೇಳೆಯಲ್ಲಿ ಹೋಂ ಗಾರ್ಡ್ ವೃತ್ತಿ ಮಾಡುತ್ತಿದ್ದರು. ವಿಶ್ವನಾಥ್ ಉಸಿರಾಟ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತ ವಿಶ್ವನಾಥ್ ದಾವಣಗೆರೆ ರಾಜ್ ನ್ಯೂಸ್ ವರದಿಗಾರ ರಾಮ್ ಪ್ರಸಾದ್ ಅವರ ಸಹೋದರ ಆಗಿದ್ದಾರೆ. ಮೃತರಿಗೆ ಓರ್ವ ಪುತ್ರಿ ಹಾಗೂ ಓರ್ವ ಪುತ್ರ ಇದ್ದು ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತ ವಿಶ್ವನಾಥ್ ನಿಧನಕ್ಕೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸಂತಾಪ ಸೂಚಿಸಿದೆ.