ಹೃದಯ ಸ್ತಂಬನದಿಂದ ಕಬಡ್ಡಿ ಆಟಗಾರ ಸಾವು

ಸೇಲಂ, ಜು.26- ಸಾವು ಯಾವ ರೂಪದಲ್ಲಿ ಬರುತ್ತದೆ ಎಂಬುದು ಹೇಳಲಿಕ್ಕೆ ಆಗುವುದಿಲ್ಲ. ಇದಕ್ಕೊಂದು ತಾಜಾ ಉದಾಹರಣೆಗೆ ಇಲ್ಲಿದೆ. ಕಬಡ್ಡಿ ಆಡುವಾಗಲೇ ಆಟಗಾರ ಹೃದಯ ಸ್ತಂಬನದಿಂದ ಮೃತಪಟ್ಟಿರುವ ಘಟನೆ ತಮಿಳುನಾಡಿ ಸೇಲಂ ಜಿಲ್ಲೆಯ ಮುನಾದಿಕುಪ್ಪಂ ಪಟ್ಟಣದಲ್ಲಿ ಸಂಭವಿಸಿದೆ.
ಮೃತಪಟ್ಟ ಕಬಡ್ಡಿ ಆಟಗಾರನನ್ನು 22 ವರ್ಷದ ವಿಮಲ್ ರಾಜ್ ಎಂದು ಗುರುತಿಸಲಾಗಿದೆ. ಸೇಲಂನ ಸಾಮಿ ಕಬಡ್ಡಿ ಅಕಾಡೆಮಿ ಆಯೋಜಿಸಿದ್ದ ಕಬಡ್ಡಿ ಟೂರ್ನಿಯಲ್ಲಿ ಆಡುವ ವೇಳೆ ‌ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಡಿಂಗ್ ಗೆ ವೇಳೆ ವಿಮಲ್ ರಾಜ್ ಮೇಲೆ ಎದುರಾಳಿ ತಂಡದವರು ಆಕ್ರಮಣ ಮಾಡಿದಾಗ ಈ ಸಂದರ್ಭದಲ್ಲಿ ಪ್ರತಿಸ್ಪರ್ಧಿ ಆಟಗಾರ ವಿಮಲ್ ರಾಜ್ ಮೇಲೆ ಓಡಿಬಂದು ಮೊಣಕಾಲು ಇಟ್ಟಿದ್ದಾನೆ. ಆಗ ವಿಮಲ್ ರಾಜ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ
ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಿಸದೇ ಹೃದಯ ಸ್ತಂಭಮನದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರ ಹೇಳಿಕೆ ಉಲ್ಲಂಘಿಸಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.