ಹೃದಯಾಘಾತ: ರಾಧಾಲಕ್ಷ್ಮೀ ನಿಧನ

ಚಿಕ್ಕನಾಯಕನಹಳ್ಳಿ, ಏ. ೧೬- ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ. ಕುಪ್ಪೂರು ಗೋಪಾಲರಾಯರ ಪತ್ನಿ ರಾಧಾಲಕ್ಷ್ಮೀ (೮೫) ಅವರು ಹೃದಯಾಘಾತದಿಂದ ನಿಧನರಾದರು.
ಮೃತರು ನಾಲ್ಕು ಜನ ಗಂಡು ಮಕ್ಕಳು, ಮಮ್ಮೊಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಶ್ರೀಯುತರ ನಿಧನಕ್ಕೆ ಕುಪ್ಪೂರು ಗದ್ದಿಗೆ ಮಠದ ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಶಾಸಕರಾದ ಬಿ. ಲಕ್ಕಪ್ಪ, ಸಿ.ಬಿ. ಸುರೇಶ್‌ಬಾಬು, ಸಾಹಿತಿ. ಡಾ.ನಾಗರಾಜರಾವ್, ಮಾಜಿ ಪುರಸಭಾಧ್ಯಕ್ಷ ಸಿ.ಡಿ. ಚಂದ್ರಶೇಖರ್, ಪುರಸಭೆ ನಾಮಿನಿ ಸದಸ್ಯ ಸಿ. ಮಲ್ಲಿಕಾರ್ಜುನಸ್ವಾಮಿ, ಬ್ಲಾಕ್ ಕಾಂಗ್ರೆಸ್ ವಕ್ತಾರ ಕೆ.ಜಿ. ಕೃಷ್ಣೇಗೌಡ ಸೇರಿದಂತೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್, ತಾಲ್ಲೂಕು ಬ್ರಾಹ್ಮಣ ಮಹಾಸಭಾ ಹಾಗೂ ತಾಲ್ಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಪಟ್ಟಣದಲ್ಲಿ ನೆರವೇರಿತು.