ಹೃದಯಾಘಾತ: ಬಸ್‌ನಲ್ಲಿ ಮೃತ್ಯು

ಮಂಗಳೂರು, ಎ.೨೩- ಪಣಂಬೂರಿನಿಂದ ಸ್ಟೇಟ್‌ಬ್ಯಾಂಕ್‌ನತ್ತ ಚಲಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಪುತ್ತೂರಿನ ವೀರಪ್ಪ (೫೦)ಮೃತಪಟ್ಟ ವ್ಯಕ್ತಿ. ಇವರು ಪಣಂಬೂರಿನಿಂದ ಬಸ್ಸಿಗೆ ಹತ್ತಿ ಸ್ಟೇಟ್‌ಬ್ಯಾಂಕ್‌ನಲ್ಲಿ ಇಳಿಯಲು ಟಿಕೆಟ್ ಪಡೆದುಕೊಂಡಿದ್ದರು. ಆದರೆ, ಸ್ಟೇಟ್‌ಬ್ಯಾಂಕ್‌ನಲ್ಲಿ ಬಸ್ಸಿನಿಂದ ಇಳಿಯದ ಕಾರಣ ಸಿಬ್ಬಂದಿಯು ಎಬ್ಬಿಸಲು ಮುಂದಾದರು. ಅಷ್ಟರಲ್ಲಿ ಅವರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ತಕ್ಷಣ ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಂದ ಪರೀಕ್ಷೆಗೊಳಪಡಿಸಿದಾಗ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.