ಹೃದಯಾಘಾತದಿಂದ ಮೃತಪಟ್ಟ ಯುವಕನ ಕುಟುಂಬಕ್ಕೆ ಶಾಸಕ ಬೆಲ್ದಾಳೆ ಸಾಂತ್ವನ, ನೆರವು

ಬೀದರ್,ಅ.18-ಹೃದಯಾಘಾತದಿಂದ ಮೃತಪಟ್ಟ ಕುಂಬಾರ ಸಮಾಜದ ಯುವಕನ ಬಡ ಕುಟುಂಬಕ್ಕೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಭೇಟಿ ನೀಡಿ ವೈಯಕ್ತಿಕ ನೆರವು ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಚಿಟ್ಟಾ ಗ್ರಾಮದ ಕುಂಬಾರ ಸಮಾಜದ ಯುವಕ ಇತ್ತಿಚೇಗೆ ಹೃದಯಾಘಾತದಿಂದ ಮೃತಪಟ್ಟ ಹಿನ್ನಲೆಯಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ ಅವರು ಗ್ರಾಮಕ್ಕೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ನೆರವು ನೀಡಿ , ಸರರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವದಾಗಿ ಭರವಸೆ ನೀಡಿದರು.
ಬಳಿಕ ಮಾತನಾಡಿದ ಅವರು, ಬೀದರ್ ದಕ್ಷಣ ಕ್ಷೇತ್ರದ ಕುಂಬಾರ ಸಮಾಜದ ಹರೀಕಾಂತ ತಂದೆ ಸಂಜುಕುಮಾರ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು ಅವರು ಅವರ ಕುಟುಂಬಸ್ಥರಿಗೆ ನೆರವಾಗಿದ್ದರು. ಅವರು ಹೃದಯಘಾತದಿಂದ ಮೃತಪಟ್ಟಿದ್ದು ಬಹಳ ನೋವುಂಟುಮಾಡಿದೆ ತನ್ನ ತಂದೆ ತಾಯಿಗೆ ಆಸರೆಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಸ್ಥರಿಗೆ ಇದೀಗ ವೈಯಕ್ತಿಕ ನೆರವು ನೀಡಿದ್ದೇನೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಗ್ರಾಮಪಂಚಾಯತನಿಂದ ವಸತಿಯೋಜನೆಯಲ್ಲಿ ಮನೆ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿ ಪಾಟೀಲ, ವಿದ್ಯಾಸಾಗರ ಸ್ವಾಮಿ, ಬಸವರಾಜ ಕ್ಯಾಸಾ, ಮಾಣಿಕರಾವ ಶಿಖಾರಿ, ಆನಂದ ಪಾಟೀಲ್, ಶಿವಕುಮಾರ ಪಾಟೀಲ್, ಶೀವು ಚೌದರಿ, ಶರಣು ಸ್ವಾಮಿ, ಶಿವರಾಜ ಮತ್ತಿತರರು ಉಪಸ್ಥಿತರಿದ್ದರು.