ಹೃದಯಾಘಾತದಿಂದ ಬೀದರ್ ಜಿಲ್ಲೆಯ ಯೋಧ ಸಾವು

ಬೀದರ್:ಎ.9: ತಮಿಳುನಾಡಿನ ಮದುರೈನಲ್ಲಿ ಟ್ರೈನಿಂಗ್ ಪಡೆಯುತ್ತಿದ್ದ ಬೀದರ್ ಜಿಲ್ಲೆ ಯೋಧರೊಬ್ಬರು ಸಾವು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಿರ್ಜಾಪುರ್ ಗ್ರಾಮದ ಸಂಜೀವಕುಮಾರ್ ರಾಯಪಳ್ಳೆ(40) ಮೃತಪಟ್ಟ ಯೋಧರಾಗಿದ್ದಾರೆ.
ಟ್ರೈನಿಂಗ್ ವೇಳೆ ಸಂಜೀವಕುಮಾರ್ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿತರಾದರೂ ಚಿಕಿತ್ಸೆ ಫಲಿಸದೇ ಯೋಧ ಸಂಜೀವಕುಮಾರ್ ಸಾವನ್ನಪ್ಪಿದ್ದಾರೆ.
ಮೃತ ಸಂಜೀವಕುಮಾರ್ ಅವರು ಉತ್ತರ ಪ್ರದೇಶದ ಅಲಹಾಬಾದ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಅಂತ ತಿಳಿದು ಬಂದಿದೆ. ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನ ಯೋಧ ಸಂಜೀವಕುಮಾರ್ ಅಗಲಿದ್ದಾರೆ.