ಹೃದಯದ ಬಗ್ಗೆ ಜನರಲ್ಲಿ ಕಾಲಜಿ ಮೂಡಿಸಬೇಕಿದೆ-ಡಾ. ಗಜಪತಿ

ಧಾರವಾಡ ಮಾ.29:ನಗರದ ಹೊಂಗಿರಣ ಫೌಂಡೇಶನ ವತಿಯಿಂದ ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸಿದ ಸಂಧರ್ಭದಲ್ಲಿ ಹಿರಿಯ ಕಲಾವಿಧರಾದ ಹಾಗೂ ರಂಗ ಪರಿಸರದ ಅಧ್ಯಕ್ಷರಾದ ವಿಠ್ಠಲ ಕೊಪ್ಪದ ಹಾಗೂ ಧಾರವಾಡದ ನಾರಾಯಣ ಹೃದಯಾಲಯದ ವೈದ್ಯಾಧಿಕಾರಿ ಹೃದಯ ರೋಗ ತಜ್ಞರಾದ ಡಾ. ವಿವೇಕಾನಂದ ಗಜಪತಿ ಇವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ವಿಠ್ಠಲ್ ಕೊಪ್ಪದ ಇವರು ರಂಗಭೂಮಿಗೆ ಸಾಕಷ್ಟು ಆಯಾಮಗಳಿವೆ ಈ ನಿಟ್ಟಿನಲ್ಲಿ ಕಲಾವಿದರು ಸಮಾಜದ ಜನತೆಗೆ ಸಾಕಷ್ಟು ವಿಷಯಗಳ ಕುರಿತು ಅರಿವು ಮೂಡಿಸುವಲ್ಲಿ ಮುಂದಾಗಬೇಕು ಎಂದು ಹೇಳಿದ ಡಾ. ವಿವೇಕಾನಂದ ಗಜಪತಿಯವರು ಹೃದಯದ ಮಿಡಿತ-ತುಡಿತಗಳ ಬಗೆಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಪ್ರೇಕ್ಷಕರಿಗೆ ಹೃದಯ ಚಿಂತನ-ಮಂಥನ ಬಗ್ಗೆ ಸವಿಸ್ತಾರವಾಗಿ ತಿಳಿಹೇಳಿದರು. 

ಹೊಂಗಿರಣ ಅಧ್ಯಕ್ಷರಾದ ಡಾ. ಎಂ.ಎಂ.ದಾಮೋದರ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ರಮೇಶ ಸುಲಾಖೆ, ಪ್ರಾರ್ಥಿಸಿದರು,  ಸದಾಶಿವನಗೌಡ ಕಬ್ಬೂರ ಪರಿಚಯಿಸಿದರು, ಸಂಘದ ಕಾರ್ಯದರ್ಶಿಯಾದ ರಾಜಕುಮಾರ ಝಿಂಗಾಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ನಾಗರತ್ನ ಸುಲಾಖೆ, ಇವರು ವಂದಿಸಿದರು ಉಳಿದಂತೆ ಶ್ರೀಹರಿ ಟಿಕಾರೆ , ಹನುಮಂತ ಸುಂಕಣ್ಣವರ, ಶ್ರೀಮತಿ ಸುಧಾ ಕಬ್ಬೂರ, ವೆಂಕಟೇಶ ಜಾಧವ ,  ವಿಜಯ ಲಾಂಡೆ ಇವರು ಉಪಸ್ಥಿತರಿದ್ದರು.